ಮಡಿಕೇರಿ, ಜ.18 : ನಗರದ ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ಶ್ರೀಚಂಡಿಕಾಯಾಗ ಮತ್ತು ಗರ್ಭಗುಡಿಯ ದ್ವಾರಗಳಿಗೆ ಬೆಳ್ಳಿ ಕವಚ ಸಮರ್ಪಣೆಯು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.

ಮಹಾಪೂಜೆಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಶ್ರೀಚಂಡಿಕಾಯಾಗಕ್ಕೆ ಸಾಕ್ಷಿಯಾದರು. ತಾ.24 ರಂದು “ರಥಸಪ್ತಮಿ”ಯ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ ಅಧ್ಯಕ್ಷ ಕೆ.ಎನ್. ಗಜಾನನ ಹಾಗೂ ಸಮಿತಿ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ದೇವಾಲಯದ ಪ್ರಧಾನ ಅರ್ಚಕ ಸತೀಶ್ ಭಟ್ ಹಾಗೂ ಅರ್ಚಕ ಬಳಗ ದೈವಿಕ ಕೈಂಕರ್ಯ ನೆರವೇರಿಸಿದರು.