ಮಡಿಕೇರಿ, ಜ. 18: ಭಾರತ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಡಿಕೇರಿ, ರಾಷ್ಟ್ರೀಯ ಸೇವಾ ಯೋಜನೆ, ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು, ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ, ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಯುವ ದಿನ ಕಾರ್ಯಕ್ರಮವನ್ನು ಇತ್ತೀಚೆಗೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ದಿಗಂತ ಮುದ್ರಣ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವೀವೆಕಾನಂದರ ಜೀವನದ ಬಗ್ಗೆ ಅವಲೋಕನ ಮಾಡಿದರು. ದೇಶದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ, ಒಳ್ಳೆಯವನಾಗು, ಉಪಕಾರಿಯಾಗು ಎಂಬ ಸಂಕಲ್ಪವನ್ನು ತೊಡಬೇಕು ಎಂದು ತಿಳಿಸಿದರು. ಬೆಂಗನಾಡ್ ಕೊಡವ ಸಮಾಜ ಚೇರಂಬಾಣೆ ಕಾರ್ಯದರ್ಶಿ ಗಣಪತಿ ಬಿ.ಬಿ. ಮಾತನಾಡಿ, ಯುವ ಶಕ್ತಿಯೇ ರಾಷ್ಟ್ರ ಶಕ್ತಿ ಎಂದರು. ನೆಹರು ಯುವ ಕೇಂದ್ರದ ಕಚೇರಿ ಸಹಾಯಕ ಪ್ರಾನ್ಸಿಸ್ ಅವರು ಒಳ್ಳೆಯ ಕೆಲಸ ಮಾಡುವ ಮೂಲಕ ಸಮಾಜದ ಸೇವೆಯನ್ನು ಮಾಡಬಹುದು ಎಂದು ತಿಳಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಡಾ. ಶ್ರೀಧರ್ ಹೆಗ್ಡೆ ಮಾತನಾಡಿ, ಒಳ್ಳೆಯ ಕೆಲಸಕ್ಕೆ, ಒಳ್ಳೆಯ ಸರ್ಮಪಣೆ, ಒಳ್ಳೆಯ ಸಮನ್ವಯ ,ಒಳ್ಳೆಯ ಸಂಘಟನೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಅನಂತಪ್ಪ, ಬೇಂಗ್‍ನಾಡ್ ಕೊಡವ ಸಮಾಜ ಅಧ್ಯಕ್ಷ ಕೆ.ಕೆ. ಕುಂಞಪ್ಪ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.