ಮಡಿಕೇರಿ, ಜ. 16: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೂರು ತಾಲೂಕುಗಳ ಯುವ ಒಕ್ಕೂಟ ಹಾಗೂ ನೇಗಳ್ಳೆ ಗ್ರಾಮದ ಶ್ರೀವೀರಭದ್ರೇಶ್ವರ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ತಾ. 21 ರಂದು 2017-18 ನೇ ಸಾಲಿನ ಕೊಡಗು ಜಿಲ್ಲಾ ಮಟ್ಟದ ಯುವಜನ ಮೇಳ ನಡೆಯಲಿದೆ ಎಂದು ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಬಾರಿ ತಾಲೂಕು ಮಟ್ಟದ ಯುವಜನ ಮೇಳಕ್ಕೆ ಅವಕಾಶವಿಲ್ಲದೆ ಇರುವುದರಿಂದ ನೇರವಾಗಿ ಜಿಲ್ಲಾ ಮಟ್ಟದ ಮೇಳ ನಡೆಯುತ್ತಿದ್ದು, ತಾಲೂಕುವಾರು ಪ್ರತಿಭೆಗಳು ಹೆಸರನ್ನು ನೋಂದಾಯಿಸಿಕೊಳ್ಳಬುದಾಗಿದೆ ಎಂದು ಹೇಳಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ತಾ. 21 ರಂದು ನಡೆಯಲಿರುವ ಯುವಜನ ಮೇಳದಲ್ಲಿ ಯುವಕ, ಯುವತಿಯರಿಗೆ ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರ ಅಭಿನಯ ಗೀಗೀ ಪದ, ಸೋಬಾನೆ ಪದ, ಭಜನೆ, ಜೋಳ ರಾಗಿ ಬೀಸುವ ಪದ, ಜಾನಪದ ನೃತ್ಯ, ಕೋಲಾಟ ಸೇರಿದಂತೆ ವಿವಿಧ ಸ್ಪರ್ದೆಗಳನ್ನು ಆಯೋಜಿಸಲಾಗಿದೆ. ಭಾಗವಹಿಸುವ ತಂಡಗಳು ತಾ. 20 ರೊಳಗೆ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರನ್ನು ಸಂಪರ್ಕಿಸಬಹುದಾಗಿದೆ ಎಂದು ನವೀನ್ ದೇರಳ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9481772110, 9483835674, 9481213920, ಸಂಪರ್ಕಿಸಬಹುದಾಗಿದೆ.