ಮಡಿಕೇರಿ, ಜ. 17: ಇಲ್ಲಿನ ಇನ್ನರ್ ವ್ಹೀಲ್ ಸಂಸ್ಥೆ ವತಿಯಿಂದ ಮಹದೇವಪೇಟೆಯ ನಗರಸಭಾ ಹಿರಿಯ ಪ್ರಾಥಮಿಕ ಶಾಲೆಗೆ (ಎ.ವಿ. ಶಾಲೆ) ಗಾಡ್ರೇಜ್, ವಾಲಿಬಾಲ್ ಹಾಗೂ ನೆಟ್, ನೋಟ್ ಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಇದೇ ಸಂದರ್ಭ ಸಂಸ್ಥೆಯ ಅಧ್ಯಕ್ಷೆ ಲತಾ ಚಂಗಪ್ಪ ಅವರು ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆ ತೆರಯಲು ಅರ್ಜಿ ಫಾರಂ ತುಂಬಲು ಸಹಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಪುಲ್ಲ ದೇವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಕಾರ್ಯದರ್ಶಿ ನಿಶಾ ಮೋಹನ್, ಖಜಾಂಚಿ ಕನ್ನು ದೇವರಾಜ್, ಸದಸ್ಯರುಗಳಾದ ಉಮಾಗೌರಿ, ಮಲ್ಲಿಗೆ ಪೈ, ಪೂರ್ಣಿಮಾ ರೈ, ಆಗ್ನೇಸ್ ಮುತ್ತಣ್ಣ, ಶಫಾಲಿ ರೈ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಕೇಶವ ಸ್ವಾಗತಿಸಿದರೆ, ರೋಸಿ ವಂದಿಸಿದರು.