ಸಿದ್ದಾಪುರ, ಜ. 17: ಕಾವೇರಿ ನದಿಯಿಂದ ಅಕ್ರಮ ಮರಳು ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಅಧಿಕಾರಿಗಳ ದಿಢೀರ್ ಧಾಳಿಗೆ ಮರಳು ದಂಧೆಕೋರರು ದಿಕ್ಕಾಪಾಲಾಗಿ ಓಡಿದ ಘಟನೆ ಕೊಂಡಗೇರಿಯಲ್ಲಿ ನಡೆದಿದೆ.
ಕೊಂಡಗೇರಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟಕ್ಕೆ ಯತ್ನಿಸುತ್ತಿದ್ದ ಮರಳು ಅಡ್ಡೆಯ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ ಪರಿಣಾಮ ದಂಧೆಕೋರರು ಮರಳು, ದೋಣಿ ಮತ್ತಿತರ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಸಾಗಾಟಕ್ಕೆ ಸಿದ್ದಪಡಿಸಿದ ಮರಳು, ದೋಣಿ ಮತ್ತಿತರ ವಸ್ತುಗಳನ್ನು ಮುಟ್ಟುಗೋಲು ಹಾಕಿದ ಅಧಿಕಾರಿಗಳು ಈ ಸಂಬಂದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಈ ಸಂದÀರ್ಭ ಭೂವಿಜ್ಞಾನ ಇಲಾಖಾಧಿಕಾರಿ ರೇಷ್ಮ ಮಾತನಾಡಿ ಪ್ರಸ್ತುತವಾಗಿ ಅಕ್ರಮ ಮರಳುಗಾರಿಕೆಯ ಕುರಿತು ಇಲಾಖೆಯು ಎಂಟು ಪ್ರಕರಣಗಳನ್ನು ದಾಖಲಿಸಿದೆ ಎಂದರು.
ಈ ಸಂದÀರ್ಭ ಭೂವಿಜ್ಞಾನ ಇಲಾಖಾಧಿಕಾರಿ ನಾಗೇಂದ್ರಪ್ಪ, ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮಲೆಕ್ಕಿಗ ಮಂಜುನಾಥ್, ಸಿದ್ದಾಪುರ ಠಾಣೆಯ ಮುಖ್ಯ ಪೇದೆ ಶ್ರೀನಿವಾಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.