ಮಡಿಕೇರಿ, ಜ. 17 : ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಮೌಲ್ಯಾಧಾರಿತ ಸುಖೀ ಸಂಸಾರ’ ಘೋಷ ವಾಕ್ಯದೊಂದಿಗೆ ತಾ. 20 ರಂದು ನಗರದಲ್ಲಿ ಸಾಹಿತ್ಯ ಸಮ್ಮೇಳನ ನÀಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಸಾಹಿತಿ ಅಡ್ಡಂಡ ಸಿ. ಕಾರ್ಯಪ್ಪ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪರಿಷತ್‍ನ ರಾಜ್ಯಾಧ್ಯಕ ಖ್ಯಾತ ಸಾಹಿತಿ ಡಾ. ದೊಡ್ಡರಂಗೇಗೌಡ ಉದ್ಘಾಟಿ ಸಲಿದ್ದು, ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ‘ಬಿಚ್ಚು ಗತ್ತಿ’ ಕೃತಿಯನ್ನು ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಹಾಗೂ ಸಾಹಿತಿ ಗುಲ್ಬರ್ಗದ ಪ್ರಭಾಕರ ಜೋಷಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ನಂತರ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಸಿ. ಅಪ್ಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳಾದ ಸ್ಮಿತಾ ಅಮೃತರಾಜ್ ಹಾಗೂ ಪÀÅತ್ತೂರು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ ರಾಷ್ಟ್ರೀಯ ಚಿಂತನಾ ಗೀತೆಗಳು ನಡೆಯಲಿವೆ.

ಮಧ್ಯಾಹ್ನ 2 ಗಂಟೆಗೆ ‘ಕಾವೇರಿ ತಾಯ ಒಡಲು -ಹಲವು ಭಾಷೆಗಳ ಮಡಿಲು’ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಕೊಡಗಿನ ಕವಿ ನಾಗೇಶ್ ಕಾಲೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುರಳಿ ಕೃಷ್ಣ ಬೆಳಾರು, ಹಾ.ತಿ. ಜಯಪ್ರಕಾಶ್, ಮುಲ್ಲೇಂಗಡ ರೇವತಿ ಪೂವಯ್ಯ,

(ಮೊದಲ ಪುಟದಿಂದ) ಶಿವದೇವಿ ಅವನೀಶ್ಚಂದ್ರ , ರವೀಂದ್ರ ಶೆಟ್ಟಿ ಉಜಿರೆ, ಉಲ್ಲಾಸ್ ಬಿ.ಹೆಚ್., ಸುನೀತಾ ಲೋಕೇಶ್, ಸಬಲಂ ಬೋಜಣ್ಣ ರೆಡ್ಡಿ, ಬಿ.ಎ. ತಲವಾರ್ ವಿವಿಧ ಭಾಷೆಗಳಲ್ಲಿ ಕವನ ವಾಚಿಸಲಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ದೊಡ್ಡರಂಗೇಗೌಡ ವಹಿಸಲಿದ್ದು, ಸಾಹಿತಿ ಡಾ. ವಿಜಯಲಕ್ಷ್ಮಿ ಬಾಳೆ ಕುಂದ್ರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಪರಿಷತ್‍ನ ಸಂಘÀಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಸಂಸ್ಕøತ ಭಾರತಿ ಪ್ರಮುಖ ಡಾ. ವಿಶ್ವಾಸ್ ಉಪಸ್ಥಿತರಿರುವರು. ಸಂಜೆ 4.30ಕ್ಕೆ ರಾಷ್ಟ್ರೀಯ ಚಿಂತನೆಯ ಕಾಫಿಯೊಂದಿಗೆ ಹರಟೆ ಕಾರ್ಯಕ್ರಮ ನಡೆಯಲಿದೆ.5 ಗಂಟೆಯ ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಡಿಕೇರಿಯ ನೃತ್ಯ ಮಂಟಪ ಟ್ರಸ್ಟ್‍ನಿಂದ ಭರತನಾಟ್ಯ, ಕೊಡವ ಸಮಾಜದಿಂದ ಬೊಳಕಾಟ್, ಗೌಡ ಯುವ ವೇದಿಕೆಯಿಂದ ಹುತ್ತರಿ ಕೋಲಾಟ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಂಗೀಲು ನೃತ್ಯ ಹಾಗೂ ಶ್ರೀ ದೇವಿ ಮಹಿಳಾ ವಿಭಾಗದಿಂದ ತಿರುವಾದಿಕರ ಕಳಿ ನಡೆಯಲಿದೆಯೆಂದು ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.

ಪರಿಷತ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ, ಸಾಹಿತ್ಯ ಹಾಗೂ ಭಾಷೆಯ ಮೂಲಕ ಏಕತೆಯನ್ನು ಮೂಡಿಸುವುದು ಪರಿಷತ್‍ನ ಉದ್ದೇಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೋರನ ಜಿ. ಸಂಚಾಲಕ ಎಂ.ಕೆ. ಜಯ ಕುಮಾರ್, ನಿರ್ದೇಶಕ ಅನಿತಾ ಕಾರ್ಯಪ್ಪ, ಹಾಗೂ ಗೌರವ ಸಲಹೆಗಾರ ಕೆ.ಆರ್.ಬಾಲಕೃಷ್ಣ ರೈ ಉಪಸ್ಥಿತರಿದ್ದರು.