ಗೋಣಿಕೊಪ್ಪ ವರದಿ, ಜ. 15: ಹಾಕಿ ಇಂಡಿಯಾ ಸಹಯೋಗದಲ್ಲಿ ಮಣಿಪುರದ ಇಂಪಾಲದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುರುಷರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದೆ.

ಟೂರ್ನಿಯ 3ನೇ ಪಂದ್ಯವಾಡಿದ ಹಾಕಿಕೂರ್ಗ್ ತಂಡವು ಬೆಂಗಾಳ್ ಹಾಕಿ ಅಸೋಸಿಯೇಷನ್ ವಿರುದ್ದ 3-1 ಗೋಲುಗಳ ಅಂತರದಿಂದ ಜಯಗಳಿಸಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು.

ತಂಡಕ್ಕೆ ದೊರೆತ 2 ಪೆನಾಲ್ಟಿ ಕಾರ್ನರ್‍ಗಳನ್ನು ಗೋಲಾಗಿ ಪರಿವರ್ತಿಸಿದ್ದರಿಂದ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಸಾಧ್ಯವಾಯಿತು. 4 ಹಾಗೂ 43ನೇ ನಿಮಿಷದಲ್ಲಿ ದೊರೆತ ಪಿಸಿಯನ್ನು ಮೈಂದಪಂಡ ಕಾರ್ಯಪ್ಪ ಗೋಲಾಗಿ ಪರಿವರ್ತಿಸಿದರು. 35ನೇ ನಿಮಿಷದಲ್ಲಿ ಕಾಂಡೇರ ರೋಹನ್ ತಿಮ್ಮಯ್ಯ ಡಿಫ್ಲೆಕ್ಷನ್ ಮೂಲಕ ಗೋಲು ದಾಖಲಿಸಿದರು.

ಲೀಗ್‍ನ ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಹಾಕಿ ತಂಡದ ವಿರುದ್ದ ಗೆಲುವು ದಾಖಲಿಸಿದ್ದ ಕೂರ್ಗ್ ತಂಡ 2ನೇ ಪಂದ್ಯದಲ್ಲಿ ಬೆಂಗಾಳ್ ವಿರುದ್ದ 1-1 ಗೋಲುಗಳ ಮೂಲಕ ಡ್ರಾ ಮಾಡಿಕೊಂಡಿತ್ತು. 3ನೇ ಪಂದ್ಯದಲ್ಲಿ ಜಯಗಳಿಸುವ ಅನಿವಾರ್ಯದಲ್ಲಿತ್ತು.

ತಂಡದಲ್ಲಿ ಆಟಗಾರರುಗಳಾದ ಹೆಚ್. ಟಿ. ಸಂಜಯ್, ಐ. ಇ. ಪಳಂಗಪ್ಪ, ಡಿ. ಎಂ ಅಚ್ಚಯ್ಯ, ಆರ್. ರಾಹುಲ್, ಅರ್. ಪುನೀತ್, ಕೆ. ಸಿ. ಬೋಪಣ್ಣ, ರೋಹನ್ ತಿಮ್ಮಯ್ಯ, ಪಿ. ಪಿ. ಬೆಳ್ಯಪ್ಪ, ಐ. ಎ. ಪೂವಣ್ಣ, ವಸಂತ್ ಕುಮಾರ್, ಎಸ್. ನಾಗೇಶ್, ಎಂ. ಎಂ. ಅಚ್ಚಯ್ಯ, ಮೈಂದಪಂಡ ಬಿ. ಕಾರ್ಯಪ್ಪ, ಮುತ್ತಾಗರ್ ಹರೀಶ್, ಕೆ. ಪಿ. ಸೋಮಣ್ಣ, ಜೆ. ಚೇತನ್, ಶಿವಾನಂದ್, ಮೋಕ್ಷಿತ್ ಉತ್ತಪ್ಪ ಹಾಗೂ ಬಿ. ಎಸ್. ವೆಂಕಟೇಶ್, ತಂಡದ ವ್ಯವಸ್ಥಾಪಕರಾಗಿ ಬೊಳ್ಳಂಡ ರೋಶನ್, ತರಬೇತುದಾರರಾಗಿ ಬಿ. ಎಸ್. ವೆಂಕಟೇಶ್ ಪಾಲ್ಗೊಂಡರು.