ನಾಪೋಕ್ಲು, ಜ. 15 : ಅಯ್ಯಂಗೇರಿಯಲ್ಲಿ ಎಸ್‍ಎಸ್‍ಎಫ್ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪ್ರತಿಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಮಾಯತ್ ಅಧ್ಯಕ್ಷ ಮಹಮದ್ ಹಾಜಿ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಅಯ್ಯಂಗೇರಿ ತಾಜುಲ್ ಉಲಾಮ ನಗರದ ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಕರೀಂ ಪಾಳಿನಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪಕ್ರುಟಿ ಉಸ್ತಾದ್, ರಫೀಕ್‍ಸಖಾಫಿ, ಹಸೈನಾರ್ ಸಾಅದಿ ಅಬ್ದುಲ್‍ರೆಹಮಾನ್, ಅಶ್ರಫ್‍ಪಿ.ಎ. ಮೊಹಿ ಅಬ್ದೀನ್‍ಕುಂಞÂ ಮಹಮದ್ ಪಿ.ಎಚ್, ಜಿಲ್ಲಾ ಕಾರ್ಯದರ್ಶಿ ರಫೀಕ್, ಉಪಾಧ್ಯಕ್ಷ ನಜೀರ್‍ಬಾಕವಿ, ಹಮೀದ್ ಮುಸ್ಲಿಯಾರ್, ಶರೀಫ್ ಸೋಮವಾರಪೇಟೆ, ಅಜೀಜ್ ಸಖಾಫಿ ಕೊಡ್ಲಿಪೇಟೆ, ಮುಸ್ತಾಫ ಸಿದ್ದಾಪುರ ಉವೈಸ್ ನಿಜಾರ್ ಸಖಾಫಿ ಪಾಲ್ಗೊಂಡಿದ್ದರು.