ಹಣೆಯಲ್ಲಿ ಮಾಸದ ಕೆಂಪಗಿನ ಉದ್ದನೆಯ ನಾಮ...ಗಡುಸಾದ ಮಾತು...ಯಾರೇ ಕೇಳಿದರೂ ಅವರೇ ಬಲ್ಲಾರಂಡ ಮಣಿ ಉತ್ತಪ್ಪ ಎಂದು ಹೇಳುವರು. ದೊಡ್ಡವರಿಂದ ಹಿಡಿದು ಬಡವ ಬಲ್ಲಿದರನ್ನು ಕರೆದು ಮಾತನಾಡಿಸುವ ಗುಣದ ವ್ಯಕ್ತಿತ್ವ.

ಸೋಮವಾರಪೇಟೆ ತಾಲೂಕು ಚೆಟ್ಟಳ್ಳಿ ಸಮೀಪದ ಈರಳೆವಳಮುಡಿ ಎಂಬ ಪುಟ್ಟ ಗ್ರಾಮದ ಮಧ್ಯಮ ಕುಟುಂಬದಲ್ಲಿ ನೆಲೆಸಿದ ಮಣಿ ಉತ್ತಪ್ಪ ಕಾಂಡನಕೊಲ್ಲಿ ಚೆಟ್ಟಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮಣಿ ಉತ್ತಪ್ಪ ಅವರÀನ್ನು ಆರ್‍ಎಸ್‍ಎಸ್‍ನ ತತ್ವಾದರ್ಶಗಳು ಸೆಳೆಯಿತು..ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯವಾಗಿ ಒಡನಾಟ ಇಟ್ಟುಕೊಂಡವರಿವರು. ಹಲವು ವರ್ಷಗಳ ನಂತರ ರಾಜಕೀಯ ಸೆಳೆತದಿಂದ ಬಿಜೆಪಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸ ತೊಡಗಿದರು.ಹತ್ತು ಹಲವು ಹೋರಾಟದಲ್ಲಿ ಪಾಲ್ಗೊಂಡ ಫಲವಾಗಿ ಹಲವು ಕೇಸುಗಳು ರೌಡಿಶೀಟರ್ ಪಟ್ಟಿಗೆ ಸೇರಿದರೂ ಎದೆಗುಂದದ ಸಮಾಜ ಸೇವಕ ಮಣಿ ಉತ್ತಪ್ಪ ಹೋರಾಟ ಮಾಡುತ್ತಲÉೀ ಬಂದು.. ಮುಂದೆಯೂ ಹೋರಾಟ ಮಾಡುತ್ತಲೇ ಪ್ರಾಣ ಬಿಡುವದಾಗಿ ಅವರ ಮನದಾಳದ ಮಾತು.

ಸ್ಥಳಿಯ ಗ್ರಾಮಗಳ ಶಾಲೆ ಸಂಘ ಸಂಸ್ಥೆಗಳಲ್ಲಿ ಗೇಟು ಧ್ವಜ ಸ್ತಂಭ, ದೇವರ ಮೂರ್ತಿಗಳನ್ನು ಸ್ವಯಂ ಖರ್ಚಿನಿಂದ ಪ್ರತಿಷ್ಠಾಪಿಸಿದ್ದ ಕೀರ್ತಿ ಒಂದೆಡೆಯಾದರೆ, ತನ್ನ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಅನೇಕಾನೇಕ ಸಾರ್ವಜನಿಕ ಕಾರ್ಯ ಕೈಗೊಂಡ ಬಗ್ಗೆ ಸಾರ್ವಜನಿಕ ಅಭಿಪ್ರಾಂiÀiಗಳು ಕೇಳಿಬರುತ್ತಿದೆ.

ಹೋರಾಟಕ್ಕೊಂದು ವೇದಿಕೆಯಾಗಿ ಹಲವು ವರ್ಷಗಳ ಹಿಂದೆ ಹುಟ್ಟು ಹಾಕಿದ ಜನಪರ ಹೋರಾಟ ಸಮಿತಿ.ಅದರಲ್ಲಿ ಸಂಚಾಲಕತ್ವದಲ್ಲಿ ಮುಲಾಜಿಲ್ಲದ ಛÀಲವಾದಿ ನಾಯಕ ಮಣಿ ಉತ್ತಪ್ಪ ಅವರ ಅದೆಷ್ಟೋ ಹೋರಾಟಗಳು, ಉಪವಾಸ ಸತ್ಯಾಗ್ರಹ, ಮಳೆ ಇಲ್ಲದೆ ಸಂಕಷ್ಟದಲ್ಲಿರುವಾಗ ಮಳೆಗಾಗಿ ಕೊಡಗಿನ ಕುಲದೇವಿ ಕಾವೇರಿ ಮಾತೆಯ ಸನ್ನಿಧಿ ತಲಕಾವೇರಿಯಿಂದ ಭಾಗಮಂಡಲದವರೆಗೆ ಉರುಳುಸೇವೆ ಮಾಡುವ ಸಂದರ್ಭ ಜೋರಾಗಿ ಮಳೆ ಬಂದು ತೋಯಿದು ಹೋದರೂ ಉರುಳು ಸೇವೆಯನ್ನು ಮಾಡಿ ಚಕಿತಗೊಳಿಸಿದರು.ಬಿಜೆಪಿಯ ಗೆಲುವಿಗೆ ಉರುಳು ಸೇವೆ ಮಾಡಿದ ಸಂದರ್ಭವೂ ಗೆಲುವು ಸಾಧಿಸಿದ ನಿದರ್ಶನವಾಗಿದೆ.

ಚೆಟ್ಟಳ್ಳಿಯ ಸಹಕಾರ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆನ್ನುವ ಮೂಲಕ ಚುನಾವಣೆಯ ಮೂಲಕ ಸ್ಪರ್ಧಿಸಿ ನಿರ್ದೇಶಕರರಾಗಿ, ಜಿಲ್ಲಾ ಸಹಕಾರ ಬ್ಯಾಂಕಿನ ಸದಸ್ಯರಾಗಿ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಸಹಕಾರ ಸಂಘದ ಜಾಗದ ಹಲವು ವಿವಾದದ ನಡುವೆಯೂ ಚೆಟ್ಟಳ್ಳಿಯ ಪಟ್ಟಣಕ್ಕೊಂದು ಕಿರೀಟದಂತಿರುವ ನರೇಂದ್ರ ಮೋದಿ ಸಹಕಾರ ಭವನ, ರೈತರ ಸಹಕಾರದೊಂದಿಗೆ ರೈತನ ನೆನಪಿಗಾಗಿ ಮೇಲಂತಸ್ತಿನಲ್ಲಿ ಅನ್ನದಾತ ವೇದಿಕೆಯನ್ನು ಎದೆಗುಂದದೆ ನಿರ್ಮಿಸಿ ಸೈ ಎನಿಸಿಕೊಂಡವರು. ಚೆಟ್ಟಳ್ಳಿ ಪ್ರಾಥಮಿಕ ಕ್ರೃಷಿ ಸಹಕಾರ ಸಂಘವನ್ನು ಉನ್ನತೀಕರಣಗೊಳಿಸುವದರ ಮೂಲಕ ಹಲವು ರೀತಿಯಲ್ಲಿ ರೈತರಿಗೆ ಅನುಕೂಲ ಮಾಡಿ ಲಾಭದ ಹಾದಿಯಲ್ಲಿ ಕೊಂಡೊಯ್ಯುತ್ತಿರುವ ಜನನಾಯಕರಾಗಿದ್ದಾರೆ.

ಜನವರಿ 15ಕ್ಕೆ ಮಣಿ ಉತ್ತಪ್ಪ ಅವರಿಗೆ 60 ವರ್ಷ ತುಂಬಿರುವದ ರಿಂದ ಇವರ ಸೇವಾ ಕಾಂiÀರ್iವನ್ನು ಗುರುತಿಸಿ ನಾಗರಿಕರ ಪರವಾಗಿ ಅÀವರ ಹುಟ್ಟು ಹಬ್ಬವನ್ನು ಚೆಟ್ಟಳ್ಳಿಯ ಸನ್ಮಾನ ಸಮಿತಿಯ ವತಿಯಿಂದ ಚೆಟ್ಟಳ್ಳಿಯ ನರೇಂದ್ರ ಮೋದಿ ಭವನದಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯೊಂದಿಗೆ ಬಲ್ಲಾರಂಡ ಮಣಿ ಉತ್ತಪ್ಪ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜನಪರ ಕಾಳಜಿ ಇರುವ ನಾಯಕರು ಕೊಡಗಿನುದ್ದಕ್ಕೂ ಹುಟ್ಟಿ ಬರಬೇಕೆನ್ನುವದು ಜನರ ಆಶಯ.

-ಪುತ್ತರಿರ ಕರುಣ್ ಕಾಳಯ್ಯ