ಸುಂಟಿಕೊಪ್ಪ, ಜ. 12: ನಮ್ಮ ಸುಂಟಿಕೊಪ್ಪ ಬಳಗದ ಪ್ರಥಮ ವರ್ಷದ ವಾರ್ಷಿಕೋತ್ಸವದ ‘ನಮ್ಮೂರಿನ ನಮ್ಮವರಿಗಾಗಿ‘ ಸಭಾ ಕಾರ್ಯಕ್ರಮ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ತಾ. 14 ರಂದು (ನಾಳೆ) ಸಂಜೆ 4 ಗಂಟೆಗೆ ನಮ್ಮ ಸುಂಟಿಕೊಪ್ಪ ಬಳಗದ ಅಡ್ಮಿನ್ ಟೀಂ ನ ಸದಸ್ಯರಾದ ಝಯ್ಧ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರದ ಎ.ಪಿ.ಸಿ.ಎಂ.ಎಸ್. ಬ್ಯಾಂಕಿನ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ನೆರವೇರಿಸಲಿರುವರು. ಮುಖ್ಯ ಭಾಷಣಕಾರರಾಗಿ ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಹೆಚ್.ಟಿ. ಅನಿಲ್, ಮುಖ್ಯ ಅತಿಥಿಯಾಗಿ ಮಡಿಕೇರಿ ಲೆಕ್ಕ ಪರಿಶೋಧಕ ಪಿ. ಡಬ್ಲ್ಯೂ. ಫ್ರಾನ್ಸಿಸ್, ಗೌರವ ಅತಿಥಿಗಳಾಗಿ ಪಿ.ಸಿ. ಮೋಹನ್,ಪಿ.ಸಿ. ಟ್ರೇಡರ್ಸ್ ಮಾಲೀಕ ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಆಗಮಿಸಲಿದ್ದಾರೆ. ಸಂಜೆ 6.30 ಗಂಟೆಗೆ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಉದ್ಘಾಟಿಸಲಿದ್ದಾರೆ ಎಂದು ನಮ್ಮ ಸುಂಟಿಕೊಪ್ಪ ಬಳಗ ತಿಳಿಸಿದೆ.