ಮಡಿಕೇರಿ, ಜ. 13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2017-18ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಶಕ್ತಿ ದಿನಪತ್ರಿಕೆಗೆ ರಾಜ್ಯಮಟ್ಟದ ಎರಡು ಪ್ರಶಸ್ತಿ ಲಭಿಸಿದೆ. ‘ಶಕ್ತಿ’ ಉಪಸಂಪಾದಕ ಶಶಿ ಸೋಮಯ್ಯ ಹಾಗೂ ಕುಶಾಲನಗರದ ‘ಶಕ್ತಿ’ ವರದಿಗಾರ ಎಂ.ಎನ್. ಚಂದ್ರಮೋಹನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲೇಖನ, ವರದಿ ಬರಹಗಳನ್ನು ಆಧರಿಸಿ ಕೊಡಮಾಡುವ ಜಿ. ನಾರಾಯಣಸ್ವಾಮಿ ಅತ್ಯುತ್ತಮ ಗ್ರಾಮೀಣ ವರದಿಗೆ ಕಾಯಪಂಡ ಶಶಿ ಸೋಮಯ್ಯ ಅವರು ಪ್ರಶಸ್ತಿಗೆ ಭಾಜನರಾದರೆ, ಮಂಡಿಬೆಲೆ ರಾಜಣ್ಣ ಅತ್ಯುತ್ತಮ ಸುದ್ದಿ ಛಾಯಾಚಿತ್ರ ಪ್ರಶಸ್ತಿಗೆ ಕುಶಾಲನಗರ ವರದಿಗಾರ ಚಂದ್ರಮೋಹನ್ ಭಾಜನರಾಗಿದ್ದಾರೆ.