ಮಡಿಕೇರಿ, ಜ. 11: ಪುರಾಣಗಳಲ್ಲಿ ಕಂಡು ಬಂದಿರುವ ಕೊಡಗಿನ ಕೊಡವರು ಮತ್ತು ಅಮ್ಮಕೊಡವರ ಮೇಲಿನ ಶಾಪ ವಿಮೋಚನೆ ಮತ್ತು ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರನ ಸನ್ನಿಧಿಯಲ್ಲಿನ ದೋಷ ನಿವಾರಣೆಗೆ ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್‍ನಿಂದ ತಾ. 15 ರಂದು ಭಾಗಮಂಡಲದಲ್ಲಿ ಚಂಡಿಕಾ ಹೋಮ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಅಧ್ಯಕ್ಷÀ ಮುದ್ದಂಡ ಬಿ. ದೇವಯ್ಯ ಮಾತನಾಡಿ, ಅಂದು ಬೆಳಿಗ್ಗೆ 7 ಗಂಟೆಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇಗುಲದ ಮುಂಭಾಗದ ಬಯಲು ಪ್ರದೇಶದಲ್ಲಿ ಪುತ್ತೂರಿನ ಕೆಮ್ಮಿಂಜೆಯ ವೇದಬ್ರಹ್ಮ ಸುಬ್ರಮಣ್ಯ ಬಳ್ಳುಕರಾಯ ಮತ್ತು ತಂಡದಿಂದ ಗಣಪತಿ ಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಇದರೊಂದಿಗೆ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಯಲ್ಲಿ ಹಿರಿಯರಾದ ಜಿ. ರಾಜೇಂದ್ರ ಮತ್ತು ಈಶ್ವರ ಭಟ್ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.

ಪುರಾಣಗಳಿಂದ ತಿಳಿದು ಬಂದಂತೆ ಕೊಡವರು ಮತ್ತು ಅಮ್ಮಕೊಡವರ ಮೇಲೆ ಶಾಪವಿದ್ದು, ಇದರ ನಿವಾರಣೆಗಾಗಿ ಮತ್ತು ನಾಡಿನ ಶಾಂತಿ ಹಾಗೂ ಸುಭಿಕ್ಷೆಗಾಗಿ 2014ನೇ ಸಾಲಿನ ಶ್ರೀ ಕೃಷ್ಣ ಯಜು ಯಾಗ, ಚಂಡಿಕಾ ಯಾಗ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಗಿತ್ತು. ನಂತರ ಪ್ರತಿ ವರ್ಷ ತಾ. 15 ರಂದು ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವದಾಗಿ ತಿಳಿಸಿದರು. ಕಳೆÉದ ಮೂರು ವರ್ಷಗಳ ಹಿಂದೆ ಶ್ರೀ ತಲಕಾವೇರಿ ಮತ್ತು ಶ್ರೀ ಭಗಂಡೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮೂಲಕ ನಡೆದ ತಾಂಬೂಲ ಪ್ರಶ್ನೆಯಲ್ಲಿ ಶ್ರೀ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ದೋಷವಿರುವದು ಕಂಡು ಬಂದು, ಇದನ್ನು ಆದಷ್ಟು ಬೆÉೀಗ ಸರಿಪಡಿಸದಿದ್ದಲ್ಲಿ ನಾಡಿಗೆ ಹಾಗೂ ಕಾವೇರಿ ನದಿ ಹರಿಯುವ ಪ್ರದೇಶದಲ್ಲಿ ಸಂಕಷ್ಟ ಎದುರಾಗುತ್ತದೆಂದು ತಿಳಿದು ಬಂದಿತ್ತು. ಇದರಂತೆ ಮೂರು ವರ್ಷಗಳ ಅವಧಿಯಲ್ಲಿ ದೋಷ ನಿವಾರಣಾ ಕಾರ್ಯ ಪೂರ್ಣಗೊಳಿಸಲು ಪ್ರಾರ್ಥನೆಯನ್ನೂ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೆ ದೋಷ ನಿವಾರಣಾ ಕಾರ್ಯ ನಡೆದಿಲ್ಲವೆಂದು ಎಂ.ಬಿ. ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆ ದೋಷ ಪರಿಹಾರ ಹಾಗೂ ನಾಡಿನ ಶಾಂತಿ ಹಾಗೂ ಸುಭಿಕ್ಷೆಗಾಗಿ ಪೂಜಾ ಕಾರ್ಯವನ್ನು ತಾ. 15 ರಂದು ಆಯೋಜಿಸಲಾಗಿದ್ದು, ನಾಡಿನ ಜನತೆ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳು ವಂತೆ ಮನವಿ ಮಾಡಿದರು. ಟ್ರಸ್ಟ್‍ನ ಉಪಾಧ್ಯಕ್ಷ ಚೆಪ್ಪುಡಿರ ಎಂ. ಪೊನ್ನಪ್ಪ ಮಾತನಾಡಿ, ತಲಕಾವೇರಿ ಕ್ಷೇತ್ರದ ದೋಷ ನಿವಾರಣೆಗೆ ಶ್ರೀ ತಲಕಾವೇರಿ ಮತ್ತು ಶ್ರೀ ಭಗಂಡೇಶ್ವರ ದೇವಸ್ಥಾಪನಾ ಸಮಿತಿ ಅಗತ್ಯ ಕ್ರಮ ಕೈಗೊಂಡಲ್ಲಿ ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ, ವ್ಯವಸ್ಥಾಪನಾ ಸಮಿತಿಗೆ ನಡೆದ ಆಯ್ಕೆಗೆ ವಿರೋಧಗಳು ವ್ಯಕ್ತವಾಗುತ್ತಿದ್ದು, ಇದನ್ನು ನಿವಾರಿಸಿಕೊಂಡು ಕ್ಷೇತ್ರದ ದೋಷ ಪರಿಹಾರಕ್ಕೆ ಅಗತ್ಯ ಕಾರ್ಯ ನಡೆಸುವಂತೆ ಕೋರಿದರು.

ಗೋಷ್ಠಿಯಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ಮುಕ್ಕಾಟಿರ ನಾಣಯ್ಯ, ಟ್ರಸ್ಟಿಗಳಾದ ಅಲ್ಲಾರಂಡ ಬೀನಾ ಬೊಳ್ಳಮ್ಮ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಉಪಸ್ಥಿತರಿದ್ದರು.