ಮಡಿಕೇರಿ, ಜ.11: ಸಮರ್ಥ ಕನ್ನಡಿಗರ ಬಳಗದಿಂದ ತಾ.13 ರಂದು ಮಡಿಕೇರಿಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ, ದೃಷ್ಟಿ ವಿಶೇಷ ಚೇತನ ಕವಿಗೋಷ್ಠಿ ಕಾರ್ಯಕ್ರಮ, ನಿರೂಪಣಾ ಕಾರ್ಯಾಗಾರ ಆಯೋಜಿಸಲಾಗಿದೆ. ಸಮರ್ಥ ಕನ್ನಡಿಗರ ಬಳಗ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಡಿನಾದ್ಯಂತ ಕಾರ್ಯಕ್ರಮ ಆಯೋಜಿಸುತ್ತಿದೆ. ಮಡಿಕೇರಿಯ ರೋಟರಿ ಸಭಾಂಗಣ ದಲ್ಲಿ ಮಧ್ಯಾಹ್ನ 1.30 ಗಂಟೆಗೆ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗ ದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತರು ಜಯಲಕ್ಷ್ಮಿ (9663119670), ಆನಂದ ದೆಗ್ಗನಹಳ್ಳಿ - (9964872442), ಮಧುಸೂದನ್ (9060969098), ಅಣ್ಣಾಜಿಮೇಟಿಗೌಡ (8310093675) ಇವರುಗಳನ್ನು ಸಂಪರ್ಕಿಸ ಬಹುದಾಗಿದೆ.