ಸೋಮವಾರಪೇಟೆ, ಜ. 11: ಹುಲ್ಲಿನ ಮೆದೆಗೆ ಆಕಸ್ಮಿಕ

ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟವಾಗಿರುವ ಘಟನೆ ಸಮೀಪದ ಬೆಟ್ಟದಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಬೆಟ್ಟದಳ್ಳಿ ಗ್ರಾಮದ ಕೃಷಿಕ ಬಿ.ಡಿ.ಕಾಳಪ್ಪ ಎಂಬವರ ಹುಲ್ಲಿನ ಮೆದೆ ಬೆಂಕಿಗಾಹುತಿಯಾಗಿದ್ದು, ಮೂರು ಸಾವಿರ ಹುಲ್ಲಿನ ಕಟ್ಟು ನಾಶವಾಗಿದೆ. ಇದರಿಂದಾಗಿ 50 ಸಾವಿರ ರೂ.ಗಳಷ್ಟು ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಕಾಳಪ್ಪ ಅವರು ಕೃಷಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.