ನಾಪೋಕ್ಲು, ಜ. 10: ಶ್ರೀಮೂಲ ಕಾವೇರಿ ಬೈವಾಡು ಸಮಿತಿ ಪಾರಾಣೆ ಕೇಂದ್ರ ಇದರ ನಾಪೋಕ್ಲು ಶಾಖೆಯ ವತಿಯಿಂದ ಶಿವರಾತ್ರಿ ದಿನದಂದು ಪ್ರತಿ ವರ್ಷದಂತೆ ಶ್ರೀಕಾವೇರಿ ಇರುಮುಡಿ ಬೈವಾಡು ಪುಣ್ಯ ತೀರ್ಥ ಯಾತ್ರೆ ಫೆ. 12 ಮತ್ತು 13 ರಂದು ಜರುಗಲಿದೆ ಎಂದು ನಾಪೋಕ್ಲು ಶಾಖೆಯ ಅಧ್ಯಕ್ಷ ಪಾಡಿಯಮ್ಮನ ಮುತ್ತಮ್ಮಯ್ಯ ಹೇಳಿದರು.

ಸ್ಥಳೀಯ ಹಳೆ ತಾಲೂಕು ಶ್ರೀಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ ಪ್ರಾರಂಭಿಸಿದ ಶ್ರೀಕಾವೇರಿ ಬೈವಾಡು ಯತ್ರೆ ಕಳೆದ ನಾಪೋಕ್ಲು, ಜ. 10: ಶ್ರೀಮೂಲ ಕಾವೇರಿ ಬೈವಾಡು ಸಮಿತಿ ಪಾರಾಣೆ ಕೇಂದ್ರ ಇದರ ನಾಪೋಕ್ಲು ಶಾಖೆಯ ವತಿಯಿಂದ ಶಿವರಾತ್ರಿ ದಿನದಂದು ಪ್ರತಿ ವರ್ಷದಂತೆ ಶ್ರೀಕಾವೇರಿ ಇರುಮುಡಿ ಬೈವಾಡು ಪುಣ್ಯ ತೀರ್ಥ ಯಾತ್ರೆ ಫೆ. 12 ಮತ್ತು 13 ರಂದು ಜರುಗಲಿದೆ ಎಂದು ನಾಪೋಕ್ಲು ಶಾಖೆಯ ಅಧ್ಯಕ್ಷ ಪಾಡಿಯಮ್ಮನ ಮುತ್ತಮ್ಮಯ್ಯ ಹೇಳಿದರು.

ಸ್ಥಳೀಯ ಹಳೆ ತಾಲೂಕು ಶ್ರೀಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ ಪ್ರಾರಂಭಿಸಿದ ಶ್ರೀಕಾವೇರಿ ಬೈವಾಡು ಯತ್ರೆ ಕಳೆದ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ತಲಕಾವೇರಿಗೆ ಯತ್ರೆ ತೆರಳಲಿದೆ. ಅಲ್ಲಿ ಅಗಸ್ತ್ಯೇಶ್ವರ ಸನ್ನಿಧಿ ಯಲ್ಲಿ ಇರುಮುಡಿ ಒಪ್ಪಿಸಿ ವಿಶೇಷ ಪೂಜೆ ಸಲ್ಲಿಸಿ ತಮ್ಮತಮ್ಮ ಮನೆಯಲ್ಲಿ ಪ್ರಸಾದ ರೂಪದಲ್ಲಿ ತಂದ ಅಕ್ಕಿಯೊಂದಿಗೆ ದೇವರಿಗೆ, ಗುರು ಕಾರೋಣರಿಗೆ ನೈವೇದ್ಯ ಅರ್ಪಿಸಲಾಗುವದು ಎಂದು ಅವರು ತಿಳಿಸಿದರು.

ಸಮಿತಿ ಕಾರ್ಯದರ್ಶಿ ಬೊಟ್ಟೋಳಂಡ ಗಣೇಶ್, ಗುರುಸ್ವಾಮಿ ಕೇಲೇಟಿರ ನಾಣಯ್ಯ, ಸಮಿತಿ ಸದಸ್ಯರಾದ ಚಿತ್ರಾ ನಾಣಯ್ಯ, ಕಂಗಾಂಡ ಬೆಳ್ಯಪ್ಪ, ಕಮಲ ಗಣೇಶ್, ಪ್ರತಿಭಾ ಚೇತನ್, ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗೆ ಪಾಡಿಯಮ್ಮನ ಮುತ್ತಮ್ಮಯ್ಯ ಅವರ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾದ: 9448721334.