ಶ್ರೀಮಂಗಲ, ಜ. 10: ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಆಶ್ರಯ ದಲ್ಲಿ ಕೈಬಿಲೀರ ಪಾರ್ವತಿಯವರು ತಮ್ಮ ಪತಿ ದಿ. ಬೋಪಯ್ಯ ಅವರ ಜ್ಞಾಪಕಾರ್ಥವಾಗಿ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಉದ್ದೇಶ ದಿಂದ ಸ್ಥಾಪಿಸಿರುವ ಕೈಬಿಲೀರ ಬೋಪಯ್ಯ ದತ್ತಿನಿಧಿಯಲ್ಲಿ ಕೊಡವ ಸಾಹಿತ್ಯ ಪೈಪೋಟಿ ನಡೆಸಲಾಗುವದು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕೊಡವ ಭಾಷೆಯಲ್ಲಿ ನೂರು ಶಬ್ಧಗಳಿಗೆ ಮೀರದಂತೆ ತಾವೇ ಸ್ವಂತ ಬರೆದಿರುವ ಇದುವರೆಗೆ ಎಲ್ಲೂ ಪ್ರಕಟವಾಗದ ಕಥೆಯನ್ನು ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೊಡವ ಭಾಷೆಯಲ್ಲಿ ಒಂದು ಹಾಳೆಗೆ ಮೀರದಂತೆ ತಾವೇ ಸ್ವಂತ ಬರೆದಿರುವ ಇದುವರೆಗೆ ಎಲ್ಲೂ ಪ್ರಕಟವಾಗದ ಕವನವನ್ನು ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮುದ್ದಿಯಡ ಕುಶ ಪೊನ್ನಪ್ಪ ದತ್ತಿನಿಧಿಯಲ್ಲಿ ಮುಕ್ತ ಕೊಡವ ಕಥೆ ಪೈಪೋಟಿಗೆ ಸ್ವ ರಚಿತ ಕೊಡವ ಕಥೆಗಳನ್ನು ಆಹ್ವಾನಿಸಲಾಗಿದೆ. ಜಾತಿ ಧರ್ಮದ ನಿರ್ಬಂಧವಿಲ್ಲದೆ ಕೊಡವ ಸಾಹಿತ್ಯ ಪ್ರೇಮಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದ್ದು, ಕೊಡವ ಭಾಷೆಯಲ್ಲಿ ಮುನ್ನೂರು ಶಬ್ಧಗಳಿಗೆ ಮೀರದಂತೆ ತಾವೇ ಸ್ವಂತ ಬರೆದಿರುವ ಇದುವರೆಗೆ ಎಲ್ಲೂ ಪ್ರಕಟವಾಗದ ಕಥೆಯನ್ನು ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಯ್ಕೆಯಾದ ಉತ್ತಮ ಕಥೆ ಹಾಗೂ ಕವನಗಳಿಗೆ ತಲಾ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿರುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಸ್ವರಚಿತ ಒಂದೊಂದು ಕಥೆ ಹಾಗೂ ಕವನವನ್ನು ತಾ. 18 ರೊಳಗೆ ತಮ್ಮ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ಶಾಲಾ ಮುಖ್ಯೋಪಾಧ್ಯಾಯರ ದೃಢೀಕೃತ ಪತ್ರದೊಂದಿಗೆ ಅಧ್ಯಕ್ಷರು, ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಅ/o ಸ್ಟೂಡೆಂಟ್ ವಲ್ರ್ಡ್ ಸ್ಟೇಷನರಿ, ಆತ್ರೇಯ ಆಸ್ಪತ್ರೆ ಎದುರು, ವೀರಾಜಪೇಟೆ ಈ ವಿಳಾಸಕ್ಕೆ ಅಥವಾ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಸದಸ್ಯರಿಗೆ ತಲುಪಿಸ ಬಹುದೆಂದು ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9448582398, 9880584732, 9448326014 ಯನ್ನು ಸಂಪರ್ಕಿಸಬಹುದು.