ಮಡಿಕೇರಿ, ಜ. 10: ಕೊಡಗು ಜಿಲ್ಲೆಯ ನಿವೃತ್ತ ಬಿಎಸ್ಎಫ್ ಯೋಧರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ತಾ. 16 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ತಾ. 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿ ಆಗಮಿಸಿದ ಸಂದರ್ಭ ಮನವಿ ಸಲ್ಲಿಸಿ ಅದರ ಪ್ರತಿಯನ್ನು ಜಿಲ್ಲಾಧಿಕಾರಿಗಳೀಗೆ ಸಲ್ಲಿಸಿದ್ದು, ಸ್ಪಂದನೆಗಾಗಿ ನೀರಿಕ್ಷಿಸುತ್ತಿದೇವೆ ಎಂದು ನಿವೃತ್ತ ಅರೆ ಸೇನಾ ಪಡೆ ಪ್ರಕಟಣೆ ತಿಳಿಸಿದೆ.