ಮಡಿಕೇರಿ, ಜ. 10: ನೆಹರು ಯುವ ಕೇಂದ್ರ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹವು ತಾ. 12 ರಂದು ಬೆಳಿಗ್ಗೆ 10.30 ಗಂಟೆಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಯುವ ದಿನ ಸಮಾರಂಭ ನಡೆಯಲಿದೆ.

ಜನವರಿ 16 ರಂದು ವಿನಾಯಕ ಯುವಕ ಸಂಘ ವತಿಯಿಂದ ದೈಹಿಕ ಸದೃಢತೆಯ ದಿನ, ಜನವರಿ 17 ರಂದು ಪ್ರತಿಭಾ ಯುವಕ ಸಂಘ, ಅರ್ವತ್ತೋಕ್ಲು ವತಿಯಿಂದ ಸೌಹಾರ್ದ ದಿನ, ಜನವರಿ 18 ರಂದು ಬಸವೇಶ್ವರ ಯುವಕ ಸಂಘದಿಂದ ಕೌಶಲ್ಯ ದಿನ, ಹಾಗೂ ಜನವರಿ 19 ರಂದು ಪೆರತಾ ಯುವಕ ಸಂಘ ವತಿಯಿಂದ ಜಾಗೃತಿ ದಿನ ನಡೆಯಲಿದೆ.

ಸಮಾರಂಭದಲ್ಲಿ ಕೊಡಗು ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಮಂಗಳೂರು ದಿಗಂತ ಮುದ್ರಣ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಪಿ.ಎಸ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಾದ ಪಾರ್ವತಿ ಅಪ್ಪಯ್ಯ, ಆಪ್ತ ಸಮಾಲೋಚಕರಾದ ಆರತಿ ಸೋಮಯ್ಯ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಜನ ಸಮನ್ವಯಾಧಿಕಾರಿ ಅನಂತಪ್ಪ, ಬೆಂಗ್‍ನಾಡ್ ಕೊಡವ ಸಮಾಜ ಚೇರಂಬಾಣೆ ಅಧ್ಯಕ್ಷರಾದ ಕೆ.ಕೆ.ಕುಂಞಪ್ಪ, ಕಾರ್ಯದರ್ಶಿ ಬಿ.ಬಿ.ಗಣಪತಿ, ಮತ್ತು ಇತರರು ಭಾಗವಹಿಸಲಿದ್ದಾರೆ.