ಶ್ರೀಮಂಗಲ, ಜ. 9: ಪೊನ್ನಂಪೇಟೆ ತಾಲೂಕು ಹೋರಾಟ 70ನೇ ದಿನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭ ನಾಗರಿಕ ವೇದಿಕೆಯ ಕಾನೂನು ಸಲಹೆಗಾರರಾದ ಮತ್ರಂಡ ಅಪ್ಪಚ್ಚು ಮಾತನಾಡಿ ಸ್ವತಂತ್ರ ಪೂರ್ವದಿಂದಲೂ ಕ್‍ಗ್ಗಟ್ಟ್‍ನಾಡ್ ತಾಲೂಕ್ಕಾಗಿ ಗುರುತಿಸಿಕೊಂಡಿದ್ದ ಪೊನ್ನಂಪೇಟೆ ತಾಲೂಕನ್ನು ಸರ್ಕಾರ ಶೀಘ್ರವಾಗಿ ತಾಲೂಕ್ಕಾಗಿ ಘೋಷಣೆ ಮಾಡಬೇಕಾಗಿದೆ ಎಂದರು.
ಹತ್ತು ದಿನಗಳ ಒಳಗೆ ತಾಲೂಕು ರಚನಾ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವದು ಎಂದರು. ವಕೀಲ ಸಂದೇಶ್ ನೆಲ್ಲಿತ್ತಾಯ ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ಸರ್ಕಾರ ಇದನ್ನು ಕಡೆಗಣಿಸಿದರೆ ನ್ಯಾಯಾಲಯದ ಮೆಟ್ಟಿಲನ್ನು ಏರಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಬಿ. ಪೂಣಚ್ಚ ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆಯಾಗುವವರೆಗೂ ಸಹಕಾರವನ್ನು ನೀಡಬೇಕೆಂದು ಕೊರಿಕೊಂಡರು.
ಚೆಟ್ರುಮಾಡ ಶಂಕರು ನಾಚಪ್ಪ ಕ್‍ಗ್ಗಟ್ಟ್‍ನಾಡಿಗೆ ಸಂಬಂಧಪಟ್ಟ ಕವನವನ್ನು ವಾಚಿಸಿದರು. ಪ್ರತಿಭಟನೆಯಲ್ಲಿ ಚೆಪ್ಪುಡಿರ ಪೊನ್ನಪ್ಪ, ಚೆಪ್ಪುಡಿರ ಸೋಮಯ್ಯ, ಲಾಲ ಮುತ್ತಪ್ಪ, ಕೋಳೆರ ದಯಾ ಚಂಗಪ್ಪ, ಕಿರಿಯಮಾಡ ಬೆಳ್ಯಪ್ಪ, ಕಟ್ಟೇರ ಲಾಲಪ್ಪ, ಕಾಳಿಮಾಡ ಮೋಟಯ್ಯ, ಆಲೀರ ಎರ್ಮುಹಾಜಿ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಪುಚ್ಚಿಮಾಡ ಹರೀಶ್, ಕೋಳೆರ ದಿಲೀಪ್, ಕಳ್ಳೆಂಗಡ ಶಂಭು ಗಣಪತಿ, ಮಾಣ್ಯಪಂಡ ದೇವಯ್ಯ, ಅಜ್ಜಿಕುಟ್ಟಿರ ಸುಬ್ರಹ್ಮಣಿ, ಮೂಕಳೇರ ಲಕ್ಷ್ಮಣ, ಐನಂಡ ಬೋಪಣ್ಣ ಭಾಗವಹಿಸಿದ್ದರು.