ಮಡಿಕೇರಿ, ಜ. 9: ತುಮಕೂರಿನಲ್ಲಿ ನಡೆದ ಬೈಕ್ ಅವಘಡದಲ್ಲಿ ಕೊಡಗು ಮೂಲದ ಯುವಕನೋರ್ವ ದುರ್ಮರಕ್ಕೀಡಾದ ಘಟನೆ ನಡೆದಿದೆ.
ಬೆಂಗಳೂರಿನ ಆರ್ .ಟಿ. ನಗರದಲ್ಲಿ ನೆಲೆಸಿರುವ ಮೂಲತಃ ವೀರಾಜಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮದ ದೇಯಂಡ ವಸಂತ ಹಾಗೂ ಭಾರತಿ ದಂಪತಿಗಳ ಪುತ್ರ ದೇಯಂಡ ಸಜನ್ ಅಯ್ಯಪ್ಪ (21) ದುರ್ಮರಣಕ್ಕೀಡಾದ ಯುವಕ. ತಾ. 8 ರಂದು ಸಂಜೆ ಸ್ನೇಹಿತನೊಂದಿಗೆ ಬೈಕ್‍ನಲ್ಲಿ ತುಮಕೂರು ಕಡೆಗೆ ಪ್ರವಾಸ ತೆರಳಿದ್ದ ಸಂದರ್ಭ ಬೈಕ್ ಅವಘಡ ಸಂಭವಿಸಿದ್ದು, ಸಜನ್ ರಸ್ತೆಗೆ ಬಿದ್ದು ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಮೃತರಾಗಿದ್ದಾರೆ. ಮೃತ ಸಜನ್ ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾನೆ. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆದಿದೆ.