ಮಡಿಕೇರಿ, ಜ. 9: ಡಿಸೆಂಬರ್ 23 ಹಾಗೂ 24 ರಂದು ಬೆಂಗಳೂರಿನ ಹೊಸಕೋಟೆಯಲ್ಲಿ ಜರುಗಿದ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೊಡಗಿನ ಕ್ರೀಡಾಪಟುಗಳು 30 ಚಿನ್ನ, 12 ಬೆಳ್ಳಿ ಹಾಗೂ 7 ಕಂಚು ಪದಕವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಸಾಧನೆ ಮಾಡಿರುವ ಕ್ರೀಡಾಪಟುಗಳು ಫೆಬ್ರವರಿ 23 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸ ಲಿರುವವರ ವಿವರ.
ಮುಲ್ಲೇರ ಪೊನ್ನಮ್ಮ ಪೂವಣ್ಣ 100 ಮೀಟರ್ ಓಟ, ಜಾವಲಿನ್‍ನಲ್ಲಿ ಪ್ರಥಮ, ಗುಂಡು ಎಸೆತ, ಚಕ್ರ ಎಸೆತ, ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ. ಮಾರಮಾಡ ಮಾಚಮ್ಮ ಪೊನ್ನಣ್ಣ ಗುಂಡು ಎಸೆತ, ಚಕ್ರ ಎಸೆತ, ಜಾವಲಿನ್ ಎಸೆತದಲ್ಲಿ ಪ್ರಥಮ, 5 ಕಿ.ಮೀ. ನಡೆಯಲ್ಲಿ ದ್ವಿತೀಯ. ಕಚ್ಚೇಟ್ಟಿರ ರೇಷ್ಮಾ ದೇವಯ್ಯ ಗುಂಡು ಎಸೆತ, ಎತ್ತರ ಜಿಗಿತ, ಜಾವಲಿನ್ ಎಸೆತದಲ್ಲಿ ಪ್ರಥಮ, ಚಕ್ರ ಎಸೆತ ತೃತೀಯ, ಹ್ಯಾಮರ್ ಎಸೆತದಲ್ಲಿ ತೃತೀಯ. ಎಂ.ಕೆ. ಸೀತಮ್ಮ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ಪ್ರಥಮ, 5 ಕಿ.ಮೀ. ನಡಿಗೆ ತೃತೀಯ. ಕಮಲಮ್ಮ ಸುರೇಶ್ 800 ಮೀಟರ್, 1500 ಮೀಟರ್ ಪ್ರಥಮ. ಬೈರಕುಂದೀರ ಶರ್ಮಿಳ 100 ಮೀಟರ್, 200 ಮೀಟರ್, ಉದ್ದ ಜಿಗಿತ, ಜಾವಲಿನ್ ಪ್ರಥಮ. ಬೈರಕುಂದೀರ ಶಶಿಕಲ ಗುಂಡು ಎಸೆತ, 200 ಮೀಟರ್, ಟ್ರಿಪಲ್ ಜಂಪ್ ಪ್ರಥಮ, 800 ಮೀಟರ್ ದ್ವಿತೀಯ, ಚಕ್ರ ಎಸೆತ ದ್ವಿತೀಯ. ಶೋಭಾ ಮುತ್ತಪ್ಪ 100 ಮೀಟರ್ ಓಟ ಪ್ರಥಮ, 200 ಮೀಟರ್, 800 ಮೀಟರ್ ದ್ವಿತೀಯ, 5 ಕಿ.ಮೀ. ನಡಿಗೆ ತೃತೀಯ. ತೆಕ್ಕಡ ಶಂಭು ಪಾರ್ವತಿ ಗುಂಡು ಎಸೆತ, ಚಕ್ರ ಎಸೆತ, 5 ಕಿ.ಮೀ. ನಡಿಗೆ, ಎತ್ತರ ಜಿಗಿತ ದ್ವಿತೀಯ. ಕೊಂಪುಳಿರ ಇಂದಿರಾ ಎತ್ತರ ಜಿಗಿತ ಪ್ರಥಮ, ಜಾವಲಿನ್ ಎಸೆತ ದ್ವಿತೀಯ, ಚಕ್ರ ಎಸೆತ ತೃತೀಯ. ಶೈಲಜಾ ಮೊಣ್ಣಪ್ಪ 5000 ಮೀಟರ್, 1500 ಮೀಟರ್ ಪ್ರಥಮ, 300 ಮೀಟರ್ ಹರ್ಡಲ್ಸ್ ದ್ವಿತೀಯ. ಹೊಸೋಕ್ಲು ಚಿಣ್ಣಪ್ಪ 5000 ಮೀಟರ್, 10000 ಮೀಟರ್, ಟ್ರಿಪಲ್ ಜಂಪ್ ಪ್ರಥಮ. ಕೆ.ಎ. ಓಂಕಾರಪ್ಪ ಗುಂಡು ಎಸೆತ ಪ್ರಥಮ, ಪೊನ್ನಚ್ಚನ ಮಾದಪ್ಪ ಗುಂಡು ಎಸೆತ ದ್ವಿತೀಯ. ಬೈರೇಟಿರ ಪೂಣಚ್ಚ 5000 ಮೀಟರ್ 10000 ಮೀಟರ್ ಪ್ರಥಮ. ಜನಾರ್ಧನ ಎಮ್ಮಿ 1500 ಮೀಟರ್ ದ್ವಿತೀಯ, 5000 ಮೀಟರ್ ತೃತೀಯ. ಪಟ್ರಪಂಡ ಚಂಗಪ್ಪ 400 ಮೀಟರ್ ಹರ್ಡಲ್ಸ್ ಪ್ರಥಮ, 400 ಮೀಟರ್ ತೃತೀಯ. ನಂದಿನೆರವಂಡ ಬಿದ್ದಪ್ಪ 5000 ಮೀಟರ್ ದ್ವಿತೀಯ. ಪೆಮ್ಮಂಡ ಅಪ್ಪಯ್ಯ 200 ಮೀಟರ್, 400 ಮೀಟರ್ ಪ್ರಥಮ, 100 ಮೀಟರ್ ದ್ವಿತೀಯ. ಹೆಚ್.ಆರ್. ಬುಜಂಗ 5000 ಮೀಟರ್ ತೃತೀಯ.