ಮಡಿಕೇರಿ, ಜ.7 : ಕೊನೆಗೂ ನಗರದ ಹಿಲ್‍ರೋಡ್ ಅವ್ಯವಸ್ಥೆಗೆ ಮುಕ್ತಿ ದೊರೆತ್ತಿದೆ. ಎಸ್‍ಎಫ್‍ಸಿ ಅನುದಾನದಡಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಮರೀಕರಣ ಆರಂಭಗೊಂಡಿದೆ.
ಹದಗೆಟ್ಟ ಕಾಂಕ್ರಿಟ್ ರಸ್ತೆಯಿಂದಾಗಿ ವಾಹನ ಚಾಲಕರು ಹಾಗೂ ಪಾದಾಚಾರಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆರನೇ ವಾರ್ಡ್‍ಗೆ ಒಳಪಡುವ ಹಿಲ್‍ರೋಡ್ ದುರಸ್ತಿ ಬಗ್ಗೆ ಕಾಳಜಿ ತೋರಿದ ಸ್ಥಳೀಯ ನಗರಸಭಾ ಸದಸ್ಯೆ ತಜಸುಂ ರಸ್ತೆಯನ್ನು ಸಂಪೂರ್ಣವಾಗಿ ಡಾಮರೀಕರಣ ಮಾಡಲು ನಿರ್ಧರಿಸಿದ್ದರು.
ಸುಮಾರು 6 ತಿಂಗಳ ಹಿಂದೆಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತಾದರೂ ಕಾಮಗಾರಿ ವಿಳಂಬವಾಗಿ ಆರಂಭಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಸದಸ್ಯೆ ತಜಸುಂ ಅವರು ಕಾಮಗಾರಿಯ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಕಾರಣಾಂತರಗಳಿಂದ ಕಾಮಗಾರಿ ಆರಂಭವಾಗಲು ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದರು.
ನಗರಸಭಾ ಪೌರಾಯುಕ್ತೆÀ ಬಿ.ಶುಭ, ಅಭಿಯಂತರರಾದ ವನಿತಾ, ತೀರ್ಥ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾóಕ್ ಈ ಸಂದರ್ಭ ಹಾಜರಿದ್ದರು.