ಮಡಿಕೇರಿ, ಜ. 7: ಇಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ‘ಊರ್ಣ ನಾಭನಿಗೊಂದು ನಮಸ್ಕಾರ’ ಕಾರ್ಯಕ್ರಮ ಉದ್ಘಾಟನೆಗೊಂಡಿತ್ತು. ಖ್ಯಾತ ಪಕ್ಷಿ ತಜ್ಞ ಡಾ ನರಸಿಂಹನ್ ಅವರು ‘ಹಿತ್ತಲ ಜೇಡಗಳು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು ಕಾರ್ಯಕ್ರಮವನ್ನು ಅಂಕುರ ಪ್ರಕೃತಿ ಸ್ನೇಹಿ ಕೃಷಿಕರ ಬಳಗ ಮಡಿಕೇರಿ, ಸಾಲಿಗ ಬಳಗ ಮೈಸೂರು ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚು ಜೇಡಗಳ ಬಗ್ಗೆ ಛಾಯಾಚಿತ್ರ ಪ್ರದರ್ಶನ ಹಾಗೂ ಮಾಹಿತಿಯನ್ನು ಆಸಕ್ತರಿಗೆ ನೀಡಲಾಯಿತು ಕಾರ್ಯಕ್ರಮದಲ್ಲಿ ಕೊಡಗಿನ ವಿವಿಧ ಶಾಲೆಗಳ ಮಕ್ಕಳು ಹಾಗೂ ಆಸಕ್ತ ನಾಗರಿಕರು ಭಾಗವಹಿಸಿ ಜೇಡಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.