ಮಡಿಕೇರಿ, ಜ. 7: ಹೊದ್ದೂರು ಪಂಚಾಯಿತಿ ವ್ಯಾಪ್ತಿಯ ಪಾಲೆÉೀಮಾಡಿನಲ್ಲಿ ನೆಲೆಸಿರುವ 260ಕ್ಕೂ ಹೆಚ್ಚಿನ ಕುಟುಂಬಗಳಿಗೆ 94ಸಿ ಮೂಲಕ ಹಕ್ಕುಪತ್ರ ನೀಡುವ ಕುರಿತು ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದಲ್ಲಿ ತಾ. 9 ರಂದು ಮಡಿಕೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಸಂದರ್ಭ ಕಪ್ಪು ಬಾವುಟ ಪ್ರದರ್ಶನ ಮಾಡುವದಾಗಿ ಬಹುಜನ ಕಾರ್ಮಿಕ ಸಂಘ ಎಚ್ಚರಿಕೆ ನೀಡಿದೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘÀಟನೆಯ ಅಧ್ಯಕ್ಷ ಕೆ. ಮೊಣ್ಣಪ್ಪ, ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಜನವರಿ 8 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವದು. ಈ ಸಂದರ್ಭ ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡದಿದ್ದಲ್ಲಿ ಜನವರಿ 9 ರಂದು ಮುಖ್ಯಮಂತ್ರಿಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡುವದಾಗಿ ತಿಳಿಸಿದರು.
ಬೇಡಿಕೆಗಳು: ಪಾಲೆÉೀಮಾಡು ನಿವಾಸಿಗಳಿಗೆ 94ಸಿಯಡಿ ಹಕ್ಕುಪತ್ರ ನೀಡಬೇಕು, ಪಾಲೆÉೀಮಾಡಿನಲ್ಲಿ ಕ್ರೀಡಾಂಗಣ ಸಂಸ್ಥೆ ಹಾಕಿರುವ ಬೇಲಿ ತೆರವುಗೊಳಿಸಿ ಸ್ಮಶಾನಕ್ಕೆ ಜಾಗವನ್ನು ದುರಸ್ತಿ ಪಡಿಸಬೇಕು, ಪಾಲೆÉೀಮಾಡು ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಜಿಲ್ಲಾಡಳಿತ ಒದಗಿಸಬೇಕು, ವೀರಾಜಪೇಟೆ ತಾಲೂಕಿನ ಪೆರುಂಬಾಡಿಯಲ್ಲಿ ಪರಿಶಿಷ್ಟರಿಗೆ ಮಂಜೂರಾದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಅಳವಡಿಸಿರುವ ಬೇಲಿಯನ್ನು ತೆರವುಗೊಳಿಸಬೇಕು, ಪೆರುಂಬಾಡಿಯ ತೆರ್ಮೆಕಾಡು ಪೈಸಾರಿಯ ಅಂದಾಜು ನೂರು ಪರಿಶಿಷ್ಟ ಕುಟುಂಬಗಳಿಗೆ ಜಾಗವನ್ನು ಮಂಜೂರು ಮಾಡಿಕೊಡಬೇಕು, ಚೆರಿಯಪರಂಬು ನಿವಾಸಿಗಳಿಗೆ 94ಸಿ ಯಡಿ ಜಾಗ ಮಂಜೂರು ಮಾಡಿ ಕೊಡಬೇಕೆಂದು ಆಗ್ರಹಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರು ವದಾಗಿ ಹೊದ್ದೂರು ಗ್ರಾ.ಪಂ ಉಪಾಧ್ಯಕ್ಷೆ ಕುಸುಮಾವತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘÀಟನೆಯ ಎಂ.ಎಸ್.ಆನಂದ, ರಾಜು ಪಿ.ವಿ. ಉಪಸ್ಥಿತರಿದ್ದರು