ಕೂಡಿಗೆ, ಜ. 6: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಇಂದು ನಿಗಧಿಯಾಗಿತ್ತು. ಸಭೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೇಮಲೀಲಾ ಸೇರಿದಂತೆ ನಾಲ್ವರು ಸದಸ್ಯರು ಮಾತ್ರ ಹಾಜುರಿದ್ದರು. 15 ಸದಸ್ಯರುಗಳು ಇರುವ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರುಗಳು ಸಂಖ್ಯೆ ಇಲ್ಲದುದರಿಂದ ಸಭೆಯನ್ನು ಅಭಿವೃದ್ಧಿ ಅಧಿಕಾರಿ ಸ್ವಾಮಿನಾಯಕ ಮುಂದೂಡಿದರು.