ಸೋಮವಾರಪೇಟೆ,ಜ.5: ಪಟ್ಟಣ ಪಂಚಾಯಿತಿಗೆ ಒಳಪಟ್ಟ ಅಂಗಡಿ ಮಳಿಗೆಗಳ ಬಾಡಿಗೆ ಪಾವತಿಸದ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿದರು.
ನೋಟೀಸ್ ನೀಡಿದರೂ ಬಾಡಿಗೆ ಪಾವತಿಸದೆ ಸತಾಯಿಸುತ್ತಿದ್ದ ಮಾಲೀಕರ ಮಳಿಗೆಗಳಿಗೆ ತೆರಳಿ ಬಾಡಿಗೆ ವಸೂಲಿಗೆ ಮುಂದಾದ ಅಧಿಕಾರಿಗಳು, ಹಣ ನೀಡದಿದ್ದರೆ ಬೀಗ ಜಡಿಯುವದಾಗಿ ಎಚ್ಚರಿಸಿದರು. ಬಾಡಿಗೆ ಹಣ ಪಾವತಿಸದ ಕೆಲ ಮಳಿಗೆಗಳಿಗೆ ಈ ಸಂದರ್ಭ ಬೀಗ ಜಡಿದರು.
ಕಳೆದ ಎರಡು ದಿನಗಳಿಂದ ಬಾಡಿಗೆ ಹಣವನ್ನು ಸಂಗ್ರಹಿಸುತ್ತಿದ್ದು, ಮೂರು ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ. ಹಿರಿಯ ಅಧಿಕಾರಿಗಳ ಅದೇಶದಂತೆ ಬಾಕಿದಾರರ ಮಳಿಗೆಗಳಿಗೆ ಬೀಗ ಹಾಕಲಾಗುತ್ತಿದೆ ಎಂದು ಪಪಂ ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.