ಮಡಿಕೇರಿ, ಜ.6 : ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾ.9 ರಂದು ನಗರಕ್ಕೆ ಆಗಮಿಸುತ್ತಿದ್ದು, ಪೂರ್ವಭಾವಿಯಾಗಿ ನಗರ ಕಾಂಗ್ರೆಸ್ ಸಮಿತಿ ನಗರದಲ್ಲಿ ಪಾದಯಾತ್ರೆ ನಡೆಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಆಹ್ವಾನಿಸಿತು.
ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ನೇತೃತ್ವದಲ್ಲಿ ನಗರದ ಮುಖ್ಯ ಬೀದಿಗಳು ಮತ್ತು ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಕಾರ್ಯಕರ್ತರು ಸಾಧನಾ ಸಮಾವೇಶಕ್ಕೆ ಸಾರ್ವಜನಿಕರನ್ನು ಆಹ್ವಾನ ಮಾಡಿದರು.
ಈ ಸಂದರ್ಭ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ನಗರಸಭಾ ಸದಸ್ಯರುಗಳಾದ ತಜಸುಂ, ಜುಲೇಕಾಬಿ, ಯತೀಶ್, ಎಂ.ಎ.ಉಸ್ಮಾನ್, ಮಾಜಿ ಸದಸ್ಯರಾದ ಸುನಿಲ್ ನಂಜಪ್ಪ, ರಮಾಮಣಿ, ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಜಫ್ರುಲ್ಲಾ, ಚಂದ್ರಶೇಖರ್, ಟಿ.ಜಿ.ನಾಣಯ್ಯ, ಕಾರ್ಯದರ್ಶಿ ಮುನೀರ್ ಮಾಚರ್, ಜಗದೀಶ್, ಯೂಸುಫ್ ಮೊಹಮ್ಮದ್, ಇಬ್ರಾಹಿಂ, ಇಸ್ಮಾಯಿಲ್, ಹಫೀಜ್ó, ಇಮ್ರಾನ್, ಕೌಸರ್, ಪಿಲೋಮಿನಾ, ರಾಧ, ಅಶ್ರಫ್, ಕುಸುಮ, ಮಿಥುನ್, ರಾಜೇಂದ್ರ, ಹನೀಫ್, ರಹಮ್ಮತ್ಉಲ್ಲಾ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.