ಮಡಿಕೇರಿ, ಜ. 5: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಪ್ರಸ್ತುತ ಯುಎಸ್ಎಯಲ್ಲಿ ನೆಲೆಸಿರುವ ಡಾ. ಮೂಡೇರ ಜಗದೀಶ್ ಅವರು ಎಫ್ಎಂಸಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಕ್ಕೆ ರೂ. 5 ಲಕ್ಷ ವನ್ನು ಕಾಲೇಜಿನಲ್ಲಿ ಕೊಠಡಿ ಕಟ್ಟಿಸಲು ಉದಾರವಾಗಿ ನೀಡಿದರು.
ಈ ಸಂದÀರ್ಭ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ, ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ, ಮೂಡೇರ ಗೀತಾ ಜಗದೀಶ್ ಕಾರ್ಯದರ್ಶಿ ಬೊಪ್ಪಂಡ ಶ್ಯಾಮ್ ಪೂಣಚ್ಚ, ನಿರ್ದೇಶಕ ಬೊಳ್ಳಜೀರ ಅಯ್ಯಪ್ಪ, ಇದ್ದರು.
ಕಾಲೇಜಿನ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ನೆರವು ನೀಡಲು ಇಚ್ಚಿಸಿದ್ದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9448366715, 9448278081 ಸಂಪರ್ಕಿಸಬಹುದು.