ಸೋಮವಾರಪೇಟೆ, ಜ. 5: ಎಸ್‍ಎಸ್‍ಎಫ್ ಆಶ್ರಯದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಭಾಗ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮ ಸಮೀಪದ ಗರಗಂದೂರು ಗ್ರಾಮದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು.

ಪ್ರತಿಭೋತ್ಸವದಲ್ಲಿ 18 ಶಾಖೆಗಳ 400ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಹೊಸತೋಟ ಎಸ್.ಎಸ್.ಎಫ್. ಘಟಕ ಪ್ರಥಮ, ಸುಂಟಿಕೊಪ್ಪ ತಂಡ ದ್ವಿತೀಯ, ಕೊಡ್ಲಿಪೇಟೆ ತಂಡ ತೃತೀಯ ಸ್ಥಾನ ಪಡೆದವು. ಜಿಲ್ಲಾ ಮಟ್ಟದ ಪ್ರತಿಭೋತ್ಸವ ತಾ. 13 ಮತ್ತು 14 ರಂದು ಅಯ್ಯಂಗೇರಿಯಲ್ಲಿ ನಡೆಯಲಿದೆ ಎಂದು ಎಸ್‍ಎಸ್‍ಎಫ್ ವಿಭಾಗ ಕಾರ್ಯದರ್ಶಿ ರಹೀಂ ಹೊಸತೋಟ ತಿಳಿಸಿದ್ದಾರೆ.