ಗೋಣಿಕೊಪ್ಪಲು, ಜ.6 : ಹಾತೂರು ಪ್ರೌಢಶಾಲೆ ಮತ್ತು ಆಡಳಿತ ಮಂಡಳಿ ವತಿಯಿಂದ ತಾ.9 ರಂದು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಾತೂರು ಸೆಕೆಂಡರಿ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ದೊಡ್ಡಮನೆ ಎ.ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.30ಕ್ಕೆ ಶಾಲಾ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭ ಕೊಳತ್ತೋಡು ಬೈಗೋಡುವಿನ ವೀರಚಕ್ರ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ.ನಂಜಪ್ಪ, ಕುಂದ ಗ್ರಾಮದ ಅಂತರರಾಷ್ಟ್ರೀಯ ಹಾಕಿ ಆಟಗಾರ ಕೊಡಂದೇರ ಎನ್.ಕುಶ ನಂಜಪ್ಪ, ಹಾತೂರು ಗ್ರಾಮದ ಒಲಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಒಕ್ಕಲಿಗರ ಆರ್ ರಘುನಾಥ್, ಕುಂದ ಗ್ರಾಮದ ಅಂತರರಾಷ್ಟ್ರೀಯ ಅಥ್ಲಿಟ್, ಅಭಿಮನ್ಯು ಅಕಾಡೆಮಿ ಸ್ಥಾಪಕ ತೀತಮಾಡ ಎಂ.ಅರ್ಜುನ್ ದೇವಯ್ಯ ಅವರುಗಳನ್ನು ಸನ್ಮಾನಿಸಲಿರುವದಾಗಿ ಸುಬ್ರಮಣಿ ತಿಳಿಸಿದ್ದಾರೆ.