ಗೋಣಿಕೊಪ್ಪ ವರದಿ, ಜ. 5: ಮೈಸೂರು ಓ.ಡಿ.ಪಿ. ಸಂಸ್ಥೆಯ ವತಿಯಿಂದ ಉತ್ತಮ ಸಾಧನೆಗೈದ ಸ್ವಸಹಾಯ ಸಂಘಗಳಿಗೆ ನೀಡಲಾಗುವ ಪ್ರಶಸ್ತಿಯನ್ನು ಪೊನ್ನಂಪೇಟೆ ಮಾತಾಯಿ ಪುರುಷ ಸ್ವಸಹಾಯ ಸಂಘ ಹಾಗೂ ಪಾಲಿಬೆಟ್ಟದ ಕರುಣಾ ಮಹಿಳಾ ಸ್ವಸಹಾಯ ಸಂಘ ಪಡೆದುಕೊಂಡಿದೆ.
ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ಮಾತಾಯಿ ಪುರುಷ ಸ್ವಸಹಾಯ ಸಂಘದ ಸಂಚಾಲಕ ಎಂ.ಬಿ. ಅನೀಶ್ ಹಾಗೂ ಪಾಲಿಬೆಟ್ಟ ಕರುಣಾ ಮಹಿಳಾ ಸಮಾಜದ ಪದಾಧಿಕಾರಿಗಳಾದ ಆಲೀಸ್, ಫಿಲೋಮಿನಾ ಸ್ವೀಕರಿಸಿದರು.
ಸಾಮಾಜಿಕ ಕೆಲಸಗಳಲ್ಲಿ ನಾಯಕಿ ಪ್ರಶಸ್ತಿಯನ್ನು ಕುಶಾಲನಗರ ಶರೀನಾ, ಆರ್ಥಿಕವಾಗಿ ಮುಂದುವರಿದ ಪ್ರಶಸ್ತಿಯನ್ನು ಪಾಲಿಬೆಟ್ಟದ ನಳಿನಿ, ರಾಜಕೀಯದಲ್ಲಿ ಸೇವೆಗಾಗಿ ಸಿದ್ದಾಪುರದ ಚಿನ್ನಮ್ಮ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಮಡಿಕೇರಿಯ ಮೀನಾಕುಮಾರಿ, ಕೃಷಿ ಕ್ಷೇತ್ರದಲ್ಲಿ ಸಾಧನೆಗಾಗಿ ವೀರಾಜಪೇಟೆಯ ಶೀಲಾ ಜೋಸೆಫ್ ಪ್ರಶಸ್ತಿ ಪಡೆದರು.
ಈ ಸಂದರ್ಭ ಒಡಿಪಿ ಸಂಸ್ಥೆನಿರ್ದೇಶಕ ಸ್ಟಾನ್ಲಿ ಡೊ. ಅಲ್ವೆಡಾ, ಸಹ ನಿರ್ದೇಶಕ ಪ್ರಶಾಮತ್ ಅಲೆಕ್ಸ್, ಪ್ರಮುಖರುಗಳಾದ ಶರ್ಮಿಳಾ ಅನೀಶ್, ಲೀನಾ ಲೋಬೋ ಹಾಗೂ ವಿಜಯ ನಾರಾಯಣ ಉಪಸ್ಥಿತರಿದ್ದರು.