ಮಡಿಕೇರಿ, ಜ. 6: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಸುತ್ತಿರುವ ಕ್ರೀಡಾ ಶಾಲೆ-ಕ್ರೀಡಾ ನಿಲಯಗಳಿಗೆ 2018-19ನೇ ಸಾಲಿಗೆ 8ನೇ ತರಗತಿಗೆ ಹಾಗೂ ಪ್ರಥಮ ಪಿ.ಯು.ಸಿ.ಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ತಾ. 9 ರಂದು ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲಾ ಕ್ರೀಡಾಂಗಣ, ತಾ. 10 ರಂದು ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ತಾಲೂಕು ಮಿನಿ ಕ್ರೀಡಾಂಗಣ ಹಾಗೂ ತಾ. 11 ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಡಿಕೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ತಿಳಿಸಿದ್ದಾರೆ.