ಮಡಿಕೇರಿ, ಜ. 6: ವಾಣಿಜ್ಯ, ವಸತಿ ಮತ್ತು ಇತರ ಉಪಯೋಗಕ್ಕಾಗಿ ನಗರಸಭೆ ವತಿಯಿಂದ ನಲ್ಲಿ ನೀರಿನ ಸಂಪರ್ಕ ಪಡೆದುಕೊಂಡಿರುವ ಕಟ್ಟಡದ ಮಾಲೀಕರು 7 ದಿನಗಳ ಒಳಗೆ ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ನಗರಸಭೆ ಕಚೇರಿಗೆ ಖುದ್ದಾಗಿ ಬಂದು ಪಾವತಿಸತಕ್ಕದ್ದು. ಇಲ್ಲವಾದಲ್ಲಿ ಯಾವದೇ ಮುನ್ಸೂಚನೆ ನೀಡದೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿ, ನೀರಿನ ಕಂದಾಯ ಬಾಕಿಯನ್ನು ಕರ್ನಾಟಕ ಪೌರಸಭೆ ಅಧಿನಿಯಮ 1964 ರಂತೆ ವಸೂಲಾತಿ ಮಾಡಲಾಗುವದು ಎಂದು ನಗರಸಭಾ ಕಾರ್ಯಾಲಯ ಪೌರಾಯುಕ್ತೆ ಬಿ. ಶುಭಾ ತಿಳಿಸಿದ್ದಾರೆ.