ವೀರಾಜಪೇಟೆ, ಜ.6: ಅಮ್ಮತ್ತಿ ವಿಭಾಗದಲ್ಲಿ ನಿರಂತರ ಕಳ್ಳತನ ನಡೆಯುತ್ತಿರುವದರಿಂದ ಆ ಭಾಗದ ಜನರು ಭಯಭೀತರಾಗಿದ್ದು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ತಾ. 10 ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಅಮ್ಮತ್ತಿ ಪಟ್ಟಣವನ್ನು ಬಂದ್ ಮಾಡಿ ಪ್ರತಿÀಭಟಿಸಲಾಗುವದು ಎಂದು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವಾರದಲ್ಲಿ ಅಮ್ಮತ್ತಿ ಸುತ್ತಮುತ್ತ ಸರಣಿ ಕಳ್ಳತನಗಳು ನಡೆದಿದೆ. ಪೋಲಿಸ್ ಇಲಾಖೆ ತನ್ನ ಕೆಲಸವನ್ನು ಮಾಡುತ್ತಿದ್ದರೂ ಕಳ್ಳರ ಕೈಚಳಕ ಮುಂದುವರೆಯುತ್ತಿದೆ. ಪಟ್ಟಣದಲ್ಲಿರುವ ಗಾಂಜಾ ಅಡ್ಡೆಗಳು ಕ್ರಿಯಾಶೀಲವಾಗಿರುವದರಿಂದ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಐಶಾರಾಮಿ ಜೀವನೋಪಾಯಕ್ಕಾಗಿ ಕಳ್ಳತನದ ಹಾದಿ ಹಿಡಿಯುತ್ತಿದ್ದಾರೆ. ಅಮ್ಮತ್ತಿ ಪೊಲೀಸ್ ವಿಭಾಗಕ್ಕೆ ಸಿಬ್ಬಂದಿಗಳ ಕೊರತೆ ಹಾಗೂ ಪೊಲೀಸ್ ಗಸ್ತು ಇಲ್ಲದೆ ಕಳ್ಳರಿಗೆ ಅವಕಾಶವಾಗಿದೆ ಈ ನಿಟ್ಟಿನಲ್ಲಿ ಪೊಲೀಸ್ ಉನ್ನತಾಧಿಕಾರಿಗಳು ಪೊಲೀಸ್ ಸಂಖ್ಯೆಯನ್ನು ಹೆಚ್ಚಿಸಿ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಅಮ್ಮತ್ತಿಯ ಪಂದಿಯಂಡ ಬೆಳ್ಯಪ್ಪ ರಸ್ತೆಯಿಂದ ಗೋಣಿಕೊಪ್ಪಕ್ಕೆ ತೆರಳುವ 13 ಕಿ.ಮಿ. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಇದೇ ರಸ್ತೆಯ ಹೊಸೂರು ಬಳಿ ನಬಾರ್ಡ್ನಿಂದ ಅಂದಾಜು ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡು ಸೇತುವೆ ಕಾಮಾಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ ಎಂದರು. ಈ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಅಡಿಯಲ್ಲಿ 5 ಕೋಟಿ ರೂ. ಬಿಡುಗಡೆಯಾಗಿದ್ದು, ಗುತ್ತಿಗೆದಾರರ ಅಸಡ್ಡೆಯಿಂದ ಕಾಮಗಾರಿ ಇನ್ನು ಪ್ರಾರಂಭವಾಗಿಲ್ಲ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ರಸ್ತೆ ಕಾವiಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಚ್ಚಿರ ರೋನಾ ಭೀಮಯ್ಯ, ಅಮ್ಮತ್ತಿ ಕೊಡವ ಸಮಾಜದ ನಿರ್ದೇಶಕ ಪಾಲಚಂಡ ಮನು ಮುತ್ತಣ್ಣ, ಉದ್ದಪಂಡ ಚಂಗಪ್ಪ, ಅಮ್ಮತ್ತಿ ಚೇಂಬರ್ ಆಫ್ ಕಾಮರ್ಸ್ನ ಕಾರ್ಯದರ್ಶಿ ಪ್ರಜೀತ್ ಉಪಸ್ಥಿತರಿದ್ದರು.