ವೀರಾಜಪೇಟೆ, ಜ. 6: ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿಗೆ ಸಮೀಪದ ಪೊರಕುನ್ನು ಬಳಿಯ ಕಾಳಕಾಟ್ ದೇವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ತಾ. 10 ರಿಂದ 12 ರವರೆಗೆ ನಡೆಯಲಿದೆ.

ಮಲಬಾರ್, ಕೊಡಗು, ದಕ್ಷಿಣ ಕನ್ನಡದಾದ್ಯಂತ ನೂರಾರು ದೇಗುಲಗಳಲ್ಲಿ ದೇವ ಪ್ರತಿಷ್ಠೆ, ಕಳಶ ಮುಂತಾದ ಧಾರ್ಮಿಕ ಕಾರ್ಯಗಳಿಗೆ ಹೆಸರುವಾಸಿಯಾದ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯುವ ಈ ಪ್ರಾಚೀನ ಕಾಲದ ಉತ್ಸವದಲ್ಲಿ ದೇಶ, ವಿದೇಶಗಳಿಂದ ಸಹಸ್ರಾರು ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ.

ಉತ್ಸವದ ಮುಖ್ಯ ಆರಾಧನೆಗಳಾದ ಮಹಾಗುರುತಿ ಪೂಜೆ ತಾ. 10 ರಂದು ರಾತ್ರಿ ನಡೆದರೆ, ತಾ. 11 ರಂದು ಬೆಳಿಗ್ಗೆಯಿಂದ ಸಂಜೆ ಕರಿ ಕುಟ್ಟಿಚಾತನ್ ಥೆಯ್ಯಮ್ ನಡೆಯಲಿದೆ. ಮಾಹಿತಿಗಾಗಿ ಕಾಳಕಾಟ್ ದೇವಾಲಯದ ತಂತ್ರಿಗಳನ್ನು 09947213899 ಸಂಪರ್ಕಿಸಬಹುದಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.