ಸಿದ್ದಾಪುರ, ಜ. 6: ಸ್ಕೂಟರ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಅಭ್ಯತ್ಮಂಗಲ ಜ್ಯೋತಿನಗರದ ನಿವಾಸಿಯಾಗಿರುವ ಸಣ್ಣರಂಗ ಎಂಬವರು ಬಸ್ ನಿಲ್ದಾಣದ ಸಮೀಪದ ರಸ್ತೆಯಲ್ಲಿ ನಡೆದು ಕೊಂಡು ಬರುತ್ತಿರುವ ಸಂದರ್ಭದಲ್ಲಿ ನೆಲ್ಯಹುದಿಕೇರಿಯ ನಿವಾಸಿ ಮುನೀರ್ ಎಂಬಾತ ಸ್ಕೂಟರ್ನಲ್ಲಿ ಡಿಕ್ಕಿ ಹೊಡೆದ ಪರಿಣಾಮ ಸಣ್ಣರಂಗನ ಕಾಲಿಗೆ ಹಾಗೂ ಕೈಯಿಗೆ ಗಂಭೀರ ಗಾಯಗೊಂಡಿದ್ದು, ಸಿದ್ದಾಪುರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.