ಮಡಿಕೇರಿ, ಜ. 3: ಕುಂಜಿಲದ ಖುತ್‍ಬುಲ್ ಆರಿಫೀನ್ ರಾತೀಬ್ ಸಂಘದ ಆಶ್ರಯದಲ್ಲಿ ತಾ. 4 ರಂದು (ಇಂದು) ಸಂಜೆ ಪಯ್‍ನರಿ ದರ್ಗಾ ಆಡಿಟೋರಿಯಂನಲ್ಲಿ ಮುಹ್ಯುದ್ಧೀನ್ ಶೈಖ್ ಅನುಸ್ಮರಣೆ ಹಾಗೂ ರಿಫಾಈ ರಾತೀಬ್ ನಡೆಯಲಿದ್ದು, ರಾತ್ರಿ 7 ಗಂಟೆಗೆ ಅಂತರ್ರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ‘ಫೋಕ್‍ಲಾರ್’ ಪ್ರಶಸ್ತಿ ವಿಜೇತ ಕೋಯಾ ಕಾಪಾಡ್ ಸಂಘದಿಂದ ರಾತೀಬ್ (ಕುತ್ತ್ ರಾತೀಬ್) ನಡೆಯಲಿದೆ.