ಗೋಣಿಕೊಪ್ಪಲು, ಜ. 3: ಬೆಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಭಾಷಣ ಮಾಡಿದ ನ್ಯೂಸ್ 18 ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ ಎನ್‍ಎಸ್‍ಎಸ್ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶವನ್ನು ಕಲ್ಪಿಸುವದರ ಜೊತೆಗೆ ಅವರಲ್ಲಿ ಮಾತನಾಡುವ ಕಲೆ ಹಾಗೂ ಸೇವಾಭಾವನೆಯನ್ನು ಮೂಡಿಸಲು ಸಹಕಾರಿ ಯಾಗಿವೆ. ಶಿಬಿರದಲ್ಲಿ ಕಲಿತದನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿಯೂ ಕೂಡ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಈ ಸಂದರ್ಭ ಬೆಳ್ಳೂರು ಗ್ರಾಮಸ್ಥರಿಗಾಗಿ ಏರ್ಪಡಿಸಲಾಗಿದ್ದ ಗ್ರಾಮೀಣ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಬಿರದ ಉತ್ತಮ ಸ್ವಯಂ ಸೇವಕ ನಾಗಿ ಶಿವಕುಮಾರ್, ಉತ್ತಮ ಸ್ವಯಂ ಸೇವಕಿಯಾಗಿ ಮೀರಾ ಹಾಗೂ ಉತ್ತಮ ಹಿರಿಯ ಸ್ವಯಂ ಸೇವಕರಾಗಿ ಪೂವಯ್ಯ ಆಯ್ಕೆಯಾದರು. ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ದುರ್ಗಾಪರಮೇಶ್ವರಿ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಇಟ್ಟೀರ ಅನು ಕಾರ್ಯಪ್ಪ, ಅಜ್ಜಿಕುಟ್ಟೀರ ಪ್ರವೀಣ್, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೂರೇರ ಮಾಯಮ್ಮ, ಇಟ್ಟಿರ ವಸಂತ್, ಇಟ್ಟಿರ ಮಂದಣ್ಣ ಶಿಕ್ಷಕರಾದ ರವೀಶ್, ಮಧು, ದುರ್ಗಾ ಪರಮೇಶ್ವರಿ ಸ್ಪೋಟ್ರ್ಸ್ ಕ್ಲಬ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಮೋನಿಕ ಶಿಬಿರದ ವರದಿ ವಾಚಿಸಿದರು. ಯೋಜನಾಧಿಕಾರಿ ಎನ್.ಪಿ. ರೀತಾ ಸ್ವಾಗತಿಸಿದರು. ಯೋಜನಾಧಿಕಾರಿ ಎಂ.ಎನ್. ವನಿತ್ ಕುಮಾರ್ ವಂದಿಸಿದರೆ, ಅಂಜೂಷ, ಸುಕನ್ಯ ನಿರೂಪಿಸಿದರು.