ಸಿದ್ದಾಪುರ, ಜ. 3: ಕೊಡುಂಙಲ್ಲೂರ್ ಭಗವತಿ ವೆಳಿಚ್ಚಾಪಾಡ್ ಸಂಘದ ಜಿಲ್ಲಾ ಸಮಾವೇಶವು ಹಾಗೂ ಕುಟುಂಬ ಸಂಗಮ ಸಿದ್ದಾಪುರದಲ್ಲಿ ಸಂಭ್ರಮದಿಂದ ನಡೆಯಿತು.ಬೆಳಿಗ್ಗೆ 10 ಗಂಟೆಗೆ ನೆಲ್ಯಹುದಿಕೇರಿ ಸಮೀಪದ ಕಾವೇರಿ ನದಿಯಿಂದ ತಾಲಪೊಲಿ ಮತ್ತು ಚೆಂಡೆ ಮೇಳ, ಮಹಿಳೆಯರ ಕುಂಭ ಕಳಸದೊಂದಿಗೆ ಶೋಭಾಯಾತ್ರೆಯು ಸಿದ್ದಾಪುರದ ಸೆಂಟಿನರಿ ಹಾಲ್‍ನವರೆಗೆ ನಡೆಯಿತು. ಶೋಭಾಯಾತ್ರೆಗೆ ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಅಧ್ಯಕ್ಷ ಪಾಲಚಂಡ ಚೀಯಣ್ಣ ಹಾಗೂ ವೆಳಿಚ್ಚಾಪಾಡ್ ಸಂಘದ ಕೇರಳ ರಾಜ್ಯದ ಕಾರ್ಯದರ್ಶಿ ಶಿಬು ಸ್ವಾಮಿ ಚಾಲನೆ ನೀಡಿದರು. ಶೋಭಾಯಾತ್ರೆ ಉದ್ದಕ್ಕೂ ಹಲವು ಮಂದಿ ಸ್ವಾಮಿಗಳಿಗೆ ಭಗವತಿ ದೇವಿಯ ಅವಾಹನೆಯಾಗಿ ಕತ್ತಿಯನ್ನು ಹಿಡಿದುಕೊಂಡು ಕುಣಿಯುತ್ತ ತಲೆಯ ಹಣೆಯ ಮೇಲೆ ಗಾಯಗಳು ಆಗಿ ರಕ್ತ ಹಣೆಯಲ್ಲಿ ಚಿಮ್ಮುತಿದ್ದರೂ ಕೂಡ ಅದನ್ನು ಲೆಕ್ಕಿಸದೇ ಉರಿಬಿಸಿಲಿನಲ್ಲಿ ಸಾಗಿ ಬಂದರು. ಇದೇ ಸಂದರ್ಭ ಕೆಲವು ಮಹಿಳೆಯರ ಮೇಲೆಯೂ ದೇವಿಯ ಆವಾಹನೆಯಾಗಿ ಕುಣಿಯುತ್ತಿದ್ದುದು ಕಂಡು ಬಂದಿತು. ಸಿದ್ದಾಪುರದ ಸೆಂಟಿನರಿ ಹಾಲ್‍ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಗವತಿ ದೇವರು ಎಲ್ಲರಿಗೂ ಆರಾಧ್ಯ ದೇವರಾಗಿದ್ದು, ಕೊಡಗು ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ದೇವಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸುತಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲರೂ ಸಂಘಟಿತರಾಗಿ ತಮ್ಮ ಆಚಾರ-ವಿಚಾರಗಳನ್ನು ಶಾಶ್ವತವಾಗಿ ಉಳಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕೆಂದು.
(ಮೊದಲ ಪುಟದಿಂದ) ಆ ಮೂಲಕ ಸಮಾಜದ ವಿಶ್ವಾಸವನ್ನು ಪಡೆದು ಸಮಾಜದಲ್ಲಿ ಒಗ್ಗಟಾಗ ಬೇಕೆಂದು ಕರೆ ನೀಡಿದರು. ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸರ್ವೇಜನ ಸುಖಿನೋ ಭವಂತೋ ಎಂಬ ಸಂದೇಶದಂತೆ ನಾವೆಲ್ಲರೂ ಭಕ್ತಿಯಿಂದ ಕೂಡಿರಬೇಕು ಅಲ್ಲದೇ ನಾವುಗಳು ಆರೋಗ್ಯವಂತರಾಗಬೇಕಾದರೆ ನಮ್ಮ ಆಚಾರ-ವಿಚಾರ, ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಜಿಲ್ಲಾ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ ಕೊಡುಂಙಲ್ಲೂರ್ ಭಗವತಿ ವೆಳಿಚ್ಚಾಪಾಡ್ ಸಂಘದ 4ನೇ ಕೊಡಗು ಜಿಲ್ಲಾ ಸಮಾವೇಶದ ಶೋಭಾಯಾತ್ರೆಯಲ್ಲಿ ಭಕ್ತಿಯ ಪರಾಕಾಷ್ಠೆಯು ಎಲ್ಲರಲ್ಲಿ ಅದ್ಬುತವಾಗಿ ಮೂಡಿ ಬಂದಿತ್ತು. ದೇವರನ್ನು ಆರಾಧಿಸುವದ್ದರಿಂದ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನೆÀ್ನಲೆಯಲ್ಲಿ ಪ್ರತಿಯೊಬ್ಬರೂ ದೇವರ ಆರಾಧನೆ ಮಾಡುವದು ಅಗತ್ಯವೆಂದರು ಕೊಡುಂಙಲ್ಲೂರ್ ಭಗವತಿ ವೆಳಿಚ್ಚಾಪಾಡ್ ಸಂಘವು ದುರ್ಬಲರಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಸ್ಪಂದಿಸುತ್ತಿರುವದು ಉತ್ತಮ ಬೆಳವಣಿಗೆ ಎಂದರು.
ಹರಿದ್ವಾರ ವಿಶ್ವಮಿತ್ರ ಗುರೂಜೀ ಅವರು ಮಾತನಾಡಿ, ಧರ್ಮ ಹಾಗೂ ಮಾನವ ವಿಚಾರ ಕುರಿತು ಮಾತನಾಡಿ ಧರ್ಮ ಎಂದರೆ ಶಾರೀರ ಮತ್ತು ಆತ್ಮದಂತೆ ಎಂದ ಅವರು ಧರ್ಮ ಎಂದರೆ ನಿತ್ಯ ನಿರಂತರ ಶಾಶ್ವತ ಸರ್ವಕಾಲಿಕ ನಿಯಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಧರ್ಮ ಎನ್ನುವದು ಯಾವದೇ ಒಂದು ಮತ ಹಾಗೂ ಪ್ರಾಂತ್ಯಕ್ಕೆ ಸೀಮಿತವಾದುದ್ದಲ್ಲ ಎಂದ ಅವರು ಧರ್ಮದ ಆತ್ಮ ಜ್ಞಾನವಾಗಿದ್ದು ಎಂದರು. ದೇಶದಲ್ಲಿ ಧರ್ಮದ ಹೆಸರಿನಲ್ಲಿ ಅನೇಕ ದ್ವೇಷಗಳು ನಡೆಯುತ್ತಿದೆ. ತಾಯಂದಿರು ಧರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಿದರು. ತಾಯಂದಿರು ಧರ್ಮದ ಸ್ವರೂಪವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸೇರಿದಂತೆ ಎಲ್ಲವು ವಿದೇಶಿಕರಣವಾಗುತ್ತಿದೆ ಎಂದು ನುಡಿದರು.
ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ ಮಾತನಾಡಿ ನಮ್ಮ ದೇಶದಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳು ಅಗತ್ಯ ಎಂದ ಅವರು ಎಲ್ಲಾ ಧರ್ಮವನ್ನು ಎಲ್ಲರೂ ಗೌರವಿಸಿ ಪ್ರೀತಿಸಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಳಿಚ್ಚಾಪಾಡ್ ಸಂಘದ ಜಿಲ್ಲಾಧ್ಯಕ್ಷ ಕೆ.ಎ. ಕಿಶಾನ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಜನೀಶ್, ಎಸ್.ಪಿ. ನಂದಕುಮಾರ್, ಸುಭದ್ರ ವೆಳಿಚ್ಚಾಪಾಡ್ ಗಿರೀಶ್ ಭಗವತಿ, ಶಿಬುಸ್ವಾಮಿ, ಪಿ.ಡಿ. ಚೀಯಣ್ಣ, ಶಿವದಾಸ್‍ಸ್ವಾಮೀಜಿ, ಜಿ.ಎಸ್. ಶಶಿಧರ್, ವಿಜಯ, ಇತರರು ಹಾಜರಿದ್ದರು. ಬಳಿಕ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಗೀತಾನಾಯ್ಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.