ಮಡಿಕೇರಿ, ಜ. 3: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಪ್ರಬಾರ) ಕಾನೆಹಿತ್ಲು ಮೊಣ್ಣಪ್ಪ ಹಾಗೂ ಮಕ್ಕಂದೂರು ನಿವಾಸಿ, ವಿಎಸ್‍ಎಸ್‍ಎನ್ ಉಪಾಧ್ಯಕ್ಷ ಕುಂಬಗೌಡನ ಪ್ರಸನ್ನ ಅವರುಗಳನ್ನು ಸರಕಾರ ನೇಮಕ ಮಾಡಿದೆ.ಈಗಾಗಲೇ ಅಧ್ಯಕ್ಷರನ್ನೊಳಗೊಂಡಂತೆ 13 ಮಂದಿಯನ್ನು ನೇಮಕ ಮಾಡಲಾಗಿದ್ದು, ಈ ಪೈಕಿ ಕೊಡಗಿನ ಮೂವರಿಗೆ ಮಾತ್ರ ಅವಕಾಶ ಲಭ್ಯವಾಗಿತ್ತು. ಈ ನಡುವೆ ಸದಸ್ಯರಾಗಿದ್ದ ಸುಳ್ಯದ ವಕೀಲ ಷರೀಫ್ ಅವರು ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ಈರ್ವರನ್ನು ನೇಮಕ ಮಾಡಲಾಗಿದ್ದು, ಕೊಡಗು ಜಿಲ್ಲೆಗೆ ಐದು ಸದಸ್ಯ ಸ್ಥಾನ ಲಭಿಸಿದಂತಾಗಿದೆ.