ಕುಶಾಲನಗರ, ಜ. 3: ಜಿಲ್ಲೆಯ ಕಕ್ಕಬೆಯಿಂದ ಕುಶಾಲನಗರದ ಕಡೆಗೆ ಅಕ್ರಮವಾಗಿ ಮರ ಸಾಗಿಸುತ್ತಿದ್ದ ಪ್ರಕರಣವೊಂದನ್ನು ಮಡಿಕೇರಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ (ಕೆಎ.12.5242) ಮತ್ತು ರೂ. 2 ಲಕ್ಷ ಮೌಲ್ಯದ ಮರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಹಂಸ ಎಂಬಾತನನ್ನು ಬಂಧಿಸಲಾಗಿದೆ.
ಕಕ್ಕಬೆಯ ನಾಲಡಿ ಬಳಿಯಿಂದ ಮರ ಸಾಗಾಟ ಮಾಡುತ್ತಿರುವ ಖಚಿತ ಸುಳಿವಿನ ಮೇರೆಗೆ ಮಡಿಕೇರಿ ಅರಣ್ಯ ಸಂಚಾರಿ ದಳದ ಡಿಎಫ್ಓ ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿ ದೇವರಾಜು ಅವರ ನೇತೃತ್ವದಲ್ಲಿ ನೆಲ್ಲಿಹುದಿಕೇರಿ ಬಳಿ ಕಾರ್ಯಾಚರಣೆ ನಡೆಸಿದ ಸಂದರ್ಭ ಕುಶಾಲನಗರದ ಕಡೆಗೆ ಬರುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿ ಕಾಡು ಜಾತಿಯ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ದಂತೆ ಮೊಕದ್ದಮೆ ದಾಖಲಿಸಿದ್ದಾರೆ. ಕಾರ್ಯಾ ಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳಾದ ದೇವರಾಜು, ನಾರಾಯಣ ಮೂಲ್ಯ, ಕೊಚ್ಚೆರ ದೇವಯ್ಯ, ಸಿಬ್ಬಂದಿಗಳಾದ ಪ್ರವೀಣ, ಪ್ರಕಾಶ್ ಪಾಲ್ಗೊಡಿದ್ದರು.