ಸುಂಟಿಕೊಪ್ಪ, ಜ. 2: ಇಲ್ಲಿನ ‘ನಮ್ಮ ಸುಂಟಿಕೊಪ್ಪ ಬಳಗ’ದ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಜಿಯಂಪಿ ಶಾಲಾ ಮೈದಾನದಲ್ಲಿ ‘ಮಹಿಳಾ ದಿನ’ ವನ್ನು ಆಚರಿಸಲಾಯಿತು.
ಮಹಿಳಾ ದಿನವನ್ನು ಕಾರ್ಯಕ್ರಮದ ಸಹ ಪ್ರಾಯೋಜಕ ರಾದ ರಮ್ಯ ಮೋಹನ್, ಹಾಗೂ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಅವರು ಉದ್ಘಾಟಿಸಿದರು. ನಮ್ಮ ಸುಂಟಿಕೊಪ್ಪ ಬಳಗ’ದ ಜಾಹೀದ್ ಅಹ್ಮದ್ ಮಾತನಾಡಿ ಬಳಗದ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ‘ನಮ್ಮೂರಿನ ನಮ್ಮವರಿಗಾಗಿ’ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ವನ್ನು ಆಯೋಜಿಸಲಾಗುತ್ತಿದ್ದು, ಇಲ್ಲಿನ ಹೋಬಳಿಯ ಮಹಿಳೆಯರಿಗೆ ಮನೋರಂಜನಾ ಕ್ರೀಡಾ ಸ್ಪರ್ಧೆಯನ್ನು ನಡೆಸಲಾಗುತ್ತಿದೆ ಎಂದರು.
ಮಹಿಳೆಯರಿಗೆ ಮಡಿಕೆ ಹೊಡೆಯುವದು, ಕುಂಟೆ- ಬಿಲ್ಲೆ, ಕೆರೆ-ದಡ, ನಿಂಬೆ-ಚಮಚ, ಲಗೋರಿ, ಬೆಂಕಿ ರಹಿತ ಅಡುಗೆ ಸ್ಪರ್ಧೆ ಎಂಬ ಸಾಂಪ್ರಾದಾಯಿಕ ಆಟೋಟ ಸ್ಪರ್ಧೆ, ಅದೇ ರೀತಿ ಯುವತಿಯರಿಗಾಗಿ ಸ್ಲೋ ಬೈಕ್ ರೇಸ್, ನೀರು ತುಂಬುವ, ಬಕೆಟ್‍ಗೆ ಚೆಂಡು ಹಾಕುವ, ಬಲೂನ್ ಹೊಡೆಯುವುದು, ಬಿಸ್ಕೆಟ್ ತಿನ್ನುವ ಸ್ಪರ್ಧೆ, ಮಕ್ಕಳ ಸಂತೆ ಸ್ಪರ್ಧೆಗಳು ನಡೆದವು.
ನಮ್ಮ ಸುಂಟಿಕೊಪ್ಪ ಬಳಗದ ಡೇನಿಸ್ ಡಿಸೋಜ, ರಂಜಿತ್ ಕುಮಾರ್, ಕೆ.ಎಸ್.ಅನಿಲ್ ಕುಮಾರ್, ರಾಜೀವ್, ಟಿ.ಜಿ. ಪ್ರೇಮ್ ಕುಮಾರ್, ಬಿಜಿತ್ ಕುಮಾರ್, ಅಶೋಕ ಶೇಟ್, ರಜಾಕ್,ಶರೀಫ್, ನಿರಂಜನ್, ಇನ್ನೀತರರು ಇದ್ದರು.