ಮಡಿಕೇರಿ, ಜ. 2: ನಿನ್ನೆದಿನ ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿದ್ದ ಖೈದಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆರೋಪಿ ಗಣೇಶ್ ಎಂಬಾತ ಫಿನಾಯಿಲ್ ಕುಡಿದು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ. ನಿನ್ನೆ ದಿನ ಶೌಚಾಲಯಕ್ಕೆಂದು ತೆರಳಿ ಶೌಚಾಲಯದ ಕಿಟಕಿಯ ಮೂಲಕ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಡಿಕೇರಿ ನಗರ ಪೊಲೀಸರು ಇಂದು ಆರೋಪಿ ಗಣೇಶ್‍ನನ್ನು ಮೈಸೂರು ಸಮೀಪ ಇಲವಾಲದಲ್ಲಿ ಬಂಧಿಸಿದ್ದಾರೆ.