ಸುಂಟಿಕೊಪ್ಪ, ಜ. 2: ತೀರಾ ಶಿಥಿಲಾವಸ್ಥೆಯಿಂದ ಕೂಡಿದ ಯಾವಾಗ ಬೇಕಾದರೂ ಧರೆಗೆ ಉರುಳಿ ಬೀಳಲಿರುವ ಓಬಿರಾಯನ ಕಾಲದ ನೀರಿನ ಟ್ಯಾಂಕ್‍ನ್ನು ಶೀಘ್ರದಲ್ಲೇ ತೆರವುಗೊಳಿಸದಿದ್ದಲ್ಲಿ ಅಪಾಯ. ಪ್ರಾಣ ಹಾನಿ ಕಟ್ಟಿಟ್ಟ ಬುತ್ತಿಯಾಗಲಿದೆ.
ಇಲ್ಲಿನ ನಾಡು ಕಛೇರಿ ಮುಂದಿರುವ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಬೃಹದಾಕಾರದ ನೀರಿನ ಟ್ಯಾಂಕ್ ಬಿರುಕು ಬಿಟ್ಟಿದೆ. ಯಾವಾಗ ಬೇಕಾದರೂ ಬೀಳಲಿದೆ ಕೊಡಗು ಜಿಲ್ಲಾ ಪರೀಷತ್ ಆಡಳಿತದ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿದ್ದ ದಿ| ಎ.ಎಂ. ಬೆಳ್ಯಪ್ಪ ಅವರು ಈ ನೀರಿನ ಟ್ಯಾಂಕ್ ಲೋಕಾರ್ಪಣೆ ಗೊಳಿಸಿದ್ದರು.
ಈಗ ಈ ನೀರಿನ ಟ್ಯಾಂಕ್ ಪಳೆಯುಳಿಕೆಯಂತಿದ್ದು, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಯಿಂದ ಅಪಾಯ ಅರಿತು ಈ ಟ್ಯಾಂಕಿಗೆ ನೀರು ಶೇಖರಿಸಿರುವ ದನ್ನು ಸ್ಥಗಿತ ಗೊಳಿಸಲಾಗಿದೆ,ಅಲ್ಲದೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಿಡಿಓ ಉಪಾಧ್ಯಕ್ಷರು ತಾಲೂಕು ಜಿ.ಪಂ.ಗೆ ಪತ್ರ ಬರೆದು ಈ ನೀರಿನ ಟ್ಯಾಂಕ್ ನೆಲಸಮ ಗೊಳಿಸಲು ಮನವಿ ಮಾಡಿ ಕೊಂಡರೂ ಅದಕ್ಕೆ ಪ್ರತಿಫಲ ದೊರಕಿದಂತಿಲ್ಲ.
ಈ ಟ್ಯಾಂಕ್‍ನ ಒತ್ತಿನಲ್ಲಿ ನಾಡು ಕಛೇರಿ ಇದೆ ಅಲ್ಲಿಗೆ ಪ್ರತಿ ನಿತ್ಯ ಕೆಲಸದ ನಿಮಿತ್ತ ನೂರಾರು ಮಂದಿ ಬರುತ್ತಾರೆ. ಟ್ಯಾಂಕ್‍ನ ಹಿಂಭಾಗದಲ್ಲಿ ಸಂತ ಅಂತೋಣಿ ಚರ್ಚ್ ಸಂತ ಮೇರಿ ಶಾಲೆಯು ಇದೆ ಏನಾದರೂ ಬಿರುಕು ಬಿಟ್ಟ ಈ ಟ್ಯಾಂಕ್ ಕುಸಿದು ಬಿದ್ದರೆ ಪ್ರಾಣ ಹಾನಿ ಅಪಾಯ ತಪ್ಪಿದಲ್ಲ! ಸಂಬಂಧಿಸಿದ ಇಲಾಖೆ ಯವರು ಈ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ನೀರಿನ ಟ್ಯಾಂಕ್ ತೆರವುಗೊಳಿಸಿ ಸಂಭವಿಸ ಬಹುದಾದ ಅನಾಹುತ ತಪ್ಪಿಸುವಂತಾಗಲಿ.