ಮಡಿಕೇರಿ, ಜ. 2: ಸರ್ಕಾರ ನೂತನ ಜವಳಿ ನೀತಿ 2013-18ರ ಯೋಜನೆಯಡಿ 2017-18ನೇ ಸಾಲಿಗೆ ಸೀವಿಂಗ್ ಮೆಷಿನ್ ಆಪರೇಟರ್, ಕೈಮಗ್ಗ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಸ್.ಎಂ.ಓ. ತರಬೇತಿಗಳನ್ನು ಮಡಿಕೇರಿ, ಕುಶಾಲನಗರ, ಶನಿವಾರಸಂತೆ, ಗೋಣಿಕೊಪ್ಪ, ವೀ.ಪೇಟೆಯಲ್ಲಿರುವ ಇಲಾಖೆಯಿಂದ ಅನುಮೋದನೆಯಾಗಿರುವ ತರಬೇತಿ ಕೇಂದ್ರಗಳಲ್ಲಿ, ತರಬೇತಿ ಯನ್ನು ಕುಶಾಲನಗರ, ಶಿರಂಗಾಲದಲ್ಲಿರುವ ಕೇಂದ್ರಗಳಲ್ಲಿ ತರಬೇತಿ ಪಡೆಯಲಿಚ್ಚಿಸುವ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೀವಿಂಗ್ ಮಷಿನ್ ಆಪರೇಟರ್ ಮತ್ತು ಕೈಮಗ್ಗ ತರಬೇತಿಗೆ ಅರ್ಹತೆ: ನಿಗದಿತ ನಮೂನೆಯಲ್ಲೂ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸತಕ್ಕದ್ದು, ಸೀವಿಂಗ್ ಮಷಿನ್ ಆಪರೇಟರ್ ಮತ್ತು ಕೈಮಗ್ಗ ತರಬೇತಿಯು 45 ದಿನಗಳ ಅವಧಿ. ತರಬೇತಿ ಪಡೆಯಲು ವಯಸ್ಸು 18 ರಿಂದ 35 ವರ್ಷದ ಒಳಪಟ್ಟಿದ್ದು ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ಆಧಾರ್ ಕಾರ್ಡ್ ಸಲ್ಲಿಸುವದು, ಪ. ಜಾತಿ, ಪ. ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ, ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಹಿಂದುಳಿದ ವರ್ಗ, ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕಡ್ಡಾಯ ಆದಾಯ ದೃಢೀಕರಣ ಪತ್ರ ನೀಡಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಪೂರ್ಣವಾದ ನಂತರ ರೂ. 3,500 ಶಿಷ್ಯವೇತನ ನೀಡಲಾಗುವದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶೇ. 100 ರಷ್ಟು ಸಿದ್ಧ ಉಡುಪು ತಯಾರಿಕಾ ಘಟಕ, ಕೈಮಗ್ಗ ಉತ್ಪನ್ನಗಳ ಘಟಕಗಳಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುವದು. ಅರ್ಜಿ ಸಲ್ಲಿಸಲು ಜನವರಿ 27 ಕೊನೆಯ ದಿನವಾಗಿದ್ದು, ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ ಕಚೇರಿ ಅಥವಾ ತರಬೇತಿ ಸಂಸ್ಥೆಗಳಲ್ಲಿ ಪಡೆಯಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.