ಸೋಮವಾರಪೇಟೆ, ಜ. 1: ಇಲ್ಲಿನ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಮಿಲ್ಡ್ರೆಡ್ ಗೋನ್ಸಾಲ್ವೇಸ್ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

1ನೇ ತರಗತಿ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಯಶಸ್ ಪ್ರಥಮ, ಚಾಲುಕ್ಯ ದ್ವಿತೀಯ, ದೀಪ್ತಿ ತೃತೀಯ ಸ್ಥಾನ ಗಳಿಸಿದರು. 2ನೇ ತರಗತಿ ವಿಭಾಗದಲ್ಲಿ ಪ್ರಾರ್ಥನ ಪ್ರಥಮ, ಮೋಹಿತ ದ್ವಿ, ವೈಭವಿ ತೃ, 3ನೇ ತರಗತಿಯಲ್ಲಿ ತ್ರಿಶಾಲ ಪ್ರ, ಸಹನ ದ್ವಿ, ಅಸ್ಲೀನ್ ತನುಷ್ ಮತ್ತು ಮಹರ್ಷಿ ತೃತೀಯ ಸ್ಥಾನ ಗಳಿಸಿದರು.

4ನೇ ತರಗತಿ ವಿಭಾಗದಲ್ಲಿ ವರ್ಣಿಕ ಪ್ರ, ಬಿಂದು ದ್ವಿ, ವಿದ್ಯಾಗೌರಿ ತೃತೀಯ, ಹೂವಿನ ಅಲಂಕಾರ ಸ್ಪರ್ಧೆಯ 5 ನೇ ತರಗತಿ ವಿಭಾಗದಲ್ಲಿ ಅಭಿಷಾ ಪ್ರ, ಪವನ್ ದ್ವಿ, 6ನೇ ತರಗತಿ ವಿಭಾಗದಲ್ಲಿ ಉಲ್ಲಾಸ್ ಪ್ರ, ಚಿಂತನ್ ದ್ವಿ, 7ನೇ ತರಗತಿಯಲ್ಲಿ ಹನಿ ಪ್ರ, ಮಿಥುನ್ ದ್ವಿ, 8ನೇ ತರಗತಿಯಲ್ಲಿ ಸುಷ್ಮಿತಾ ಪ್ರ, ಕಿರಣ್ ಮತ್ತು ಪೂರ್ವಿಕ್ ದ್ವಿತೀಯ ಸ್ಥಾನ ಗಳಿಸಿದರು. 9ನೇ ತರಗತಿಯಲ್ಲಿ ತನುಷ್ ಮತ್ತು ಸಾಕ್ಷಿ ಪ್ರಥಮ, ಜನನಿ ಮತ್ತು ಶರಣ್ಯ ದ್ವಿತೀಯ, 10ನೇ ತರಗತಿಯಲ್ಲಿ ಆದಿತ್ಯ ಪ್ರಥಮ, ವಿಕಾಸ್ ದ್ವಿತೀಯ ಸ್ಥಾನ ಗಳಿಸಿದರು.