ಮಡಿಕೇರಿ, ಜ. 2: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ದೇಶದಲ್ಲಿಯೇ ಮಾದರಿ ಸರಕಾರವಾಗಿದೆ ಎಂದು ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸರಕಾರದಿಂದ ಕಾರ್ಯಗತಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.ಕೆ.ಎ. ಯಾಕುಬ್ ಅಭಿಪ್ರಾಯ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಐದು ವರ್ಷಗಳನ್ನು ಪೂರೈಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿ ಯಲ್ಲಿ ರಾಜ್ಯದ ಅಲ್ಪಸಂಖ್ಯಾತರು ಅಭ್ಯುದಯವನ್ನು ಕಂಡಿದ್ದು, ಹಿಂದೆಂದೂ ಬಿಡುಗಡೆಯಾಗದಷ್ಟು ಅನುದಾನ ಅಲ್ಪಸಂಖ್ಯಾತರ ಏಳಿಗೆಗಾಗಿ ಸರಕಾರÀ ನೀಡಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಸಹಕಾರ ದಿಂದ ಶಾದಿಭಾಗ್ಯ ಯೋಜನೆಯಡಿ ಕೊಡಗು ಜಿಲ್ಲೆಗೆ 2013 ರಿಂದ 2017 ರವರೆಗೆ 629 ಫಲಾನುಭವಿಗಳು 3.14 ಕೋಟಿ ರೂ., ಕ್ರೈಸ್ತ ಸಮುದಾಯದ 126 ಫಲಾನುಭವಿಗಳಿಗೆ 63 ಲಕ್ಷ ರೂ. ಅನುದಾನದ ಲಾಭ ಪಡೆದಿದ್ದಾರೆ ಎಂದರು.

ಜೈನರಿಗೆ 2.50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಯಾದರೂ ಫಲಾನುಭವಿಗಳು ಬಾರದೆ ಹಣ ಬಾಕಿಯಾಗಿದ್ದು, ಅರ್ಹರು ಯೋಜನೆಯ

(ಮೊದಲ ಪುಟದಿಂದ) ಲಾಭ ಪಡೆಯುವಂತೆ ಮನವಿ ಮಾಡಿದರು.

2017-18 ನೇ ಸಾಲಿನಲ್ಲಿ ಜಿಲ್ಲೆಯ ಮದರಸಾಗಳಿಗೆ ಮೂಲಭೂತ ಸೌಲಭ್ಯ ಮತ್ತು ಕಂಪ್ಯೂಟರ್ ಸೇರಿದಂತೆ ಇತರ ಚಟುವಟಿಕೆಗಳಿಗೆ ತಲಾ ರೂ.10 ಲಕ್ಷದಂತೆ 58 ಮದರಸಾಗಳಿಗೆ 5.80 ಕೋಟಿ ರೂ. ಬಿಡುಗಡೆಯಾಗಿದೆ. ಚರ್ಚ್‍ಗಳ ನವೀಕರಣಕ್ಕೆ ರೂ.1.35 ಕೋಟಿ, ಎರಡು ಮೊರಾರ್ಜಿ ಶಾಲೆಗಳಿಗೆ ರೂ.21.10 ಕೋಟಿ, ಕುಶಾಲನಗರ ವಿದ್ಯಾರ್ಥಿ ನಿಲಯಕ್ಕಾಗಿ ರೂ.1 ಕೋಟಿ ನೀಡಲಾಗಿದೆ. ಮಾದಾಪುರ ಮಸೀದಿಗೆ 1 ಕೋಟಿ ರೂ. ಬಿಡುಗಡೆಯಾಗಿದೆ.

ಶಾದಿ ಮಹಲ್‍ಗಾಗಿ 2.77 ಕೋಟಿ ರೂ. 2017-18 ರಲ್ಲಿ ಬಿಡುಗಡೆಯಾಗಿದೆ. ಮೌಲಾನಾ ಆಜಾóದ್ ಭವನ ನಿರ್ಮಾಣಕ್ಕಾಗಿ ರೂ.1.39 ಕೋಟಿ, ಅಲ್ಪಸಂಖ್ಯಾತರ ನಿರುದ್ಯೋಗ ಯುವಕರಿಗೆ 5 ಮಂದಿಗೆ ಟ್ಯಾಕ್ಸಿ ಹೊಂದಲು ತಲಾ 3 ಲಕ್ಷ ರೂ. ನೀಡಲಾಗಿದೆ. ವಕ್ಫ್‍ಬೋರ್ಡ್‍ನಿಂದ ಮದರಸ, ಮಸೀದಿ ಅಭಿವೃದ್ಧಿ, ಕಬರಸ್ತಾನ್ ತಡೆಗೋಡೆ ನಿರ್ಮಾಣಕ್ಕೆ 4 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೆ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ವ್ಯವಸ್ಥೆಯನ್ನು ಅಲ್ಪಸಂಖ್ಯಾತರು ಪಡೆದಿದ್ದಾರೆ. 94ಸಿ, 94 ಸಿಸಿ ಮೂಲಕ ಅನೇಕ ಅಲ್ಪಸಂಖ್ಯಾತ ಫಲಾನುಭವಿಗಳು ಭೂಮಿಯ ಹಕ್ಕು ಪಡೆದು ತೃಪ್ತರಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ನಾಮ ನಿರ್ದೇಶಿತ ಸದಸ್ಯ ಎಂ.ಎ. ಉಸ್ಮಾನ್ ಹಾಗೂ ಅಲ್ಪಸಂಖ್ಯಾತರ ಘಟಕದ ಸಂಯೋಜಕರಾದ ಸುರಯ್ಯಾ ಅಬ್ರಾರ್ ಉಪಸ್ಥಿತರಿದ್ದರು.

ತೆನ್ನಿರ ಮೈನಾ ಹೇಳಿಕೆ

ರಾಜ್ಯ ಕಾಂಗ್ರೆಸ್ ಸರ್ಕಾರದ ನಾಲ್ಕೂವರೆ ವರ್ಷಗಳ ಆಡಳಿತ ಜನಪ್ರಿಯತೆಯನ್ನು ಗಳಿಸಿದ್ದು, ಕೊಡಗು ಜಿಲ್ಲೆಯ ಮಟ್ಟಿಗೆ ಈ ಅಧಿಕಾರವಧಿ ಸುವರ್ಣ ಕಾಲವೆಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘÀಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದ್ದಾರೆ.

ಪೋಡಿ ಮುಕ್ತ ಅಭಿಯಾನದಲ್ಲಿ ಮಡಿಕೇರಿ ತಾಲೂಕಿನ 93 ಗ್ರಾಮಗಳು, ವೀರಾಜಪೇಟೆ ತಾಲೂಕಿನ 69 ಗ್ರಾಮಗಳು, ಸೋಮವಾರಪೇಟೆ ತಾಲೂಕಿನ 143 ಗ್ರಾಮಗಳಲ್ಲಿ ಜಮೀನಿನ ಅಳತೆ ಮತ್ತು ದುರಸ್ತಿ ಕಾರ್ಯ ನಡೆದಿದ್ದು, ಕಂದಾಯ ಸಮಸ್ಯೆಗಳು ನಿವಾರಣೆಯಾಗುತ್ತಿದೆ.

ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿಯಲ್ಲಿ ರೈತರ ಭೂ ಅಭಿವೃದ್ಧಿ, ಆಟದ ಮೈದಾನ, ನಮ್ಮ ಹೊಲ ನಮ್ಮ ದಾರಿ, ಸ್ಮಶಾನ ಭೂ ಅಭಿವೃದ್ಧಿ, ನಮ್ಮ ಹಳ್ಳಿ ನಮ್ಮ ನೀರು, ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣ, ರೈತರ ಕಣ ನಿರ್ಮಾಣ, ಕುರಿ ಮತ್ತು ದನದ ದೊಡ್ಡಿ, ನಮ್ಮೂರ ಕೆರೆ, ಮನೆಗೊಂದು ಶೌಚಾಲಯ, ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಸಂಯೋಜಕ ಪಿ.ಎಲ್. ಸುರೇಶ್ ಸಂಪಾಜೆ, ತಾಲೂಕು ಸಂಯೋಜಕ ಕೊಂಬುಗೌಡನ ಪ್ರಸನ್ನ ಹಾಗೂ ಡಿಸಿಸಿ ಸದಸ್ಯರಾದ ಕೇಟೋಳಿರ ಮೋಹನ್ ರಾಜ್ ಉಪಸ್ಥಿತರಿದ್ದರು.

ಹನೀಫ್ ಸಂಪಾಜೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಸಮಥರ್À ರೀತಿಯಲ್ಲಿ ಆಡಳಿತವನ್ನು ನಡೆಸಿದ್ದು, ದೇಶದಲ್ಲಿಯೆ ಕರ್ನಾಟಕ ಮಾದರಿ ರಾಜ್ಯವೆನ್ನುವ ಖ್ಯಾತಿಯನ್ನು ಗಳಿಸಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿ ವಿಶೇಷ ಪ್ಯಾಕೇಜನ್ನು ನೀಡಿದ್ದು, ಸುಮಾರು 200 ಕೋಟಿ ರೂ.ಗಳಲ್ಲಿ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಿವೆ ಎಂದರು. ಪ್ರತಿವರ್ಷ 50 ಕೋಟಿ ರೂ. ರಸ್ತೆ ಅಭಿವೃದ್ಧಿಗಾಗಿ ಬಿಡುಗಡೆಯಾಗುತ್ತಿದ್ದು, ಹಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳನ್ನು ಅದ್ಧೂರಿಯಾಗಿ ಸ್ವಾಗತಿಸುವದಕ್ಕಾಗಿ ಮತ್ತು ಸಮಾವೇಶವನ್ನು ಯಶಸ್ವಿಗೊಳಿಸುವದಕ್ಕಾಗಿ ವಲಯ ಕಾಂಗ್ರೆಸ್ ಮಟ್ಟದ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹೂವಯ್ಯ, ಉಪಾಧ್ಯಕ್ಷ ಸರ್ಫುದ್ದೀನ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ ಹಾಗೂ ಗೋಣಿಕೊಪ್ಪ ಉಪಾಧ್ಯಕ್ಷ ಅಂಕಿತ್ ಪೊನ್ನಪ್ಪ ಉಪಸ್ಥಿತರಿದ್ದರು.