ವೀರಾಜಪೇಟೆ, ಜ. 2: ವೀರಾಜಪೇಟೆಯ ಕೊಮ್ಮೆತೋಡು ಬಳಿ ನ್ಯಾನೋ ಹಾಗೂ ಮಾರುತಿ 800 ಕಾರುಗಳ ನಡುವೆ ಉಂಟಾದ ಮುಖಾ ಮುಖಿ ಡಿಕ್ಕಿಯಲ್ಲಿ ನಾಲ್ವರು ಗಂಭೀರ ಸ್ವರೂಪದ ಗಾಯಗೊಂಡು ಕೇರಳದ ಕಣ್ಣಾನೂರಿನ ಕೊಹ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ
ವಧು ನೋಡುವ ಸಲುವಾಗಿ ಕೇರಳದ ಕಣ್ಣಾನೂರಿನಿಂದ (ಕೆ.ಎಲ್ 09ಎನ್528) ಮಾರುತಿ ಕಾರಿನಲ್ಲಿ ಬಂದು ಅಪರಾಹ್ನ 2.30 ಗಂಟೆಗೆ ಹಿಂತಿರುಗುತ್ತಿದ್ದಾಗ ಕೊಮ್ಮೆತೋಡಿನ ಬಳಿಯಲ್ಲಿ ಎದುರಿನಿಂದ ಬಂದ (ಕೆ.ಎ.12 ಪಿ 948) ಡಿಕ್ಕಿಯಾದ ಪರಿಣಾಮವಾಗಿ ಕಾರಿನಲ್ಲಿದ್ದ ಮೀನಾಕ್ಷಿ, ರಾಮಚಂದ್ರ, ಪುಷ್ಪವಲ್ಲಿ ಹಾಗೂ ಶೋಭಾ ಎಂಬವರುಗಳು ತೀವ್ರ ಗಾಯಗೊಂಡಿದ್ದಾರೆ.
ನ್ಯಾನೋ ಕಾರಿನ ಚಾಲಕ ರಚನ್ ಮೇದಪ್ಪ ಅವರಿಗೂ ಕಾಲಿಗೆ ಗಾಯ ಉಂಟಾಗಿದೆ. ಮಾರುತಿ ಕಾರಿನ ಮುಂಭಾಗ ಜಖಂಗೊಂಡಿದೆ.
ಮಾರುತಿ ಕಾರಿನ ಚಾಲಕ ಟಿ.ಸಿ.ವಿನೀಶ್ ನೀಡಿದ ದೂರಿನ ಮೇರೆ ಗ್ರಾಮಾಂತರ ಪೊಲೀಸರು ರಚನ್ ಮೇದಪ್ಪ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.