ನಾಪೆÇೀಕ್ಲು, ಜ. 1: ಮಕ್ಕಳಿಗೆ ಉತ್ತಮ ನಾಗರಿಕ ಜೀವನವನ್ನು ರೂಪಿಸಬೇಕು ಎಂಬ ದ್ಯೇಯೋದ್ದೇಶ ದೊಂದಿಗೆ ಶಿಕ್ಷಣಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಪೆÇೀಷಕರು ಮಾರ್ಗದರ್ಶನ ನೀಡುವದರೊಂದಿಗೆ ಮಕ್ಕಳ ಭಾವನೆಗಳನ್ನು ಗೌರವಿಸುವ, ವಿಕಸನಗೊಳಿಸುವ ಉತ್ತಮ ಪರಿಸರ ಕಲ್ಪಿಸಬೇಕು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್ ಹೇಳಿದರು.
ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದೆ ಪೆÇೀಷಕರು ಅತ್ಯಂತ ಜಾಣ್ಮೆಯಿಂದ, ತಿಳುವಳಿಕೆ ಯಿಂದ ತಮ್ಮ ಮಕ್ಕಳ ಬದುಕನ್ನು ರೂಪಿಸುತ್ತಿದ್ದರು. ಇಂದು ಜನರು ಸಂದರ್ಭದ ಬಲಿಪಶುಗಳಾಗಿದ್ದಾರೆ. ಸಂತೋಷ, ಭಾವನೆ, ಸಹಬಾಳ್ವೆ ಮತ್ತಿತರ ಅಂಶಗಳನ್ನು ಮನರಂಜನಾ ಸಾಧನಗಳು ಕಸಿದುಕೊಂಡಿದೆ. ಮಕ್ಕಳನ್ನು ತಿದ್ದುವ, ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಪೋಷಕರ ಮೇಲಿದೆ ಎಂದರು. ಮಕ್ಕಳ ಭಾವನೆಯನ್ನು ಗುರುತಿಸಿ ಉತ್ತಮ ಪರಿಸರದ ಹಾದಿಯಲ್ಲಿ ಬದಲಾವಣೆ ಮಾಡಬೇಕಿದೆ. ಮನೆಯಲ್ಲಿ, ಶಾಲೆಯಲ್ಲಿ ಉತ್ತಮ ಪರಿಸರವನ್ನು ನಿರ್ಮಿಸಬೇಕಿದೆ. ಇಂದು ನಾವು ನಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದು ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕಂಬೀರಂಡ ಕಿಟ್ಟು ಕಾಳಪ್ಪ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವಾರ್ಷಿಕೋತ್ಸವ, ಕ್ರೀಡಾಕೂಟಗಳು, ಶೈಕ್ಷಣಿಕ ಪ್ರವಾಸ ಮತ್ತಿತರ ಅಂಶಗಳು ಸಹಕಾರಿ ಎಂದರು. ಶಿಕ್ಷಣದೊಂದಿಗೆ ಆರೋಗ್ಯ ದತ್ತಲೂ ಶಿಕ್ಷಕರು ಗಮನಹರಿಸ ಬೇಕಾದುದು ಅವಶ್ಯಕವಾಗಿದ್ದು ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸಬೇಕಾದ ಅಗತ್ಯವಿದೆ ಎಂದರು.
ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡಾಸ್ಪರ್ಧೆಗಳನ್ನು ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಸಂಚಾಲಕ ನುಚ್ಚಿಮಣಿಯಂಡ ಚಿಂಗಪ್ಪ ಉದ್ಘಾಟಿಸಿದರು. ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂಗೆಟಿರ ಅಚ್ಚಯ್ಯ ಧ್ವಜಾರೋಹಣ ನೆರವೇರಿಸಿದರು.
ವಿದ್ಯಾರ್ಥಿಗಳಿಂದ ಉಮ್ಮತಾಟ್, ಬೊಳಕಾಟ್, ಸಾಮೂಹಿಕ ಅಂಗಸಾಧನೆ, ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರೌಢಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ ಮತ್ತು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸಿ.ಕೆ.ಕಾವೇರಿ ಶಾಲಾ ವರದಿ ವಾಚಿಸಿದರು. ಶಿಕ್ಷಕ ಸಿ.ಎಸ್.ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಎಂ.ಬಿ. ಉಮೇಶ್ ವಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದವರಿಗೆ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ಮಂಡ್ಯದ ಪ್ರಗತಿಪರ ಸೇವಾ ಸಂಸ್ಥೆಯು ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಂiÀiಲ್ಲಿ ಆರನೇ ರ್ಯಾಂಕ್ ಗಳಿಸಿದ ಒಂದನೇ ತರಗತಿಯ ವಿದ್ಯಾರ್ಥಿನಿ ಕೆ.ಜಿ.ತಂಗಮ್ಮಳನ್ನು ಶಾಲು ಹೊದೆಸಿ ನೇತಾಜಿ ಕೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಸನ್ಮಾನಿಸಿದರು.