ಭಾಗಮಂಡಲ, ಜ. 1: ವರ್ಷಂಪ್ರತಿ ಮಳೆಗಾಲದಲ್ಲಿ ಪ್ರವಾಹದಲ್ಲಿ ಮುಳುಗಡೆಯಾಗುವ ಭಾಗಮಂಡಲದ ಜನತೆಯು ಬಹುಬೇಡಿಕೆಯ ಯೋಜನೆ ಯಾಗಿರುವ ಮೇಲ್ಸೇತುವೆ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿತು.ಯಾವದೇ ಮಾಹಿತಿ ಇಲ್ಲದೆ, ಅಧಿಕಾರಿಗಳು, ಗುತ್ತಿಗೆದಾರರು, ಸ್ಥಳೀಯ ಕೆಲವರು ಮಾತ್ರ ಸೇರಿಕೊಂಡು ಭೂಮಿಪೂಜೆ ನೆರವೇರಿಸಿದ್ದಾರೆ. ಈ ಬಗ್ಗೆ ಮಾಹಿತಿ ಬಯಸಿದ ಸಂದರ್ಭದಲ್ಲಿ ಅಧಿಕೃತವಾಗಿ ಜಿಲ್ಲೆಗೆ ಮುಖ್ಯ ಮಂತ್ರಿಗಳು ಆಗಮಿಸುವ ಸಂದರ್ಭ ಮಡಿಕೇರಿಯಲ್ಲಿ ಚಾಲನೆ ನೀಡಲಿದ್ದಾರೆ. ಇದೀಗ ಕೆಲಸಗಳಿಗೆ ಯಾವದೇ ವಿಘ್ನ ಬರಬಾರದೆಂಬ ಸದುದ್ದೇಶದೊಂದಿಗೆ ಪೂಜೆ ನೆರವೇರಿಸಿರುವದಾಗಿ ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.